ಧಾರವಾಡ : ಮನಗುಂಡಿ ಗ್ರಾಮ ಪಂಚಾಯತಿಯ ಎರಡನೇ ವಾರ್ಡಿಗೆ ಸ್ಪರ್ಧೆ ಮಾಡಿದ ಗ್ರಾಮ ಪಂಚಾಯತಿ ಅಭ್ಯರ್ಥಿಯೊಬ್ಬರು ನಿಧನರಾಗಿದ್ದಾರೆ. ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮದ ಎರಡನೇ ವಾರ್ಡಿನಲ್ಲಿ ಅ ವರ್ಗದಿಂದ ಸ್ಪರ್ಧೆ ಮಾಡಿದ್ದ ಶೋಭಾ ಮಲ್ಲೇಶ ಹಡಪದ ಸಾವಿಗೀಡಾದ ಮಹಿಳೆಯಾಗಿದ್ದಾರೆ.
ತಡ ರಾತ್ರಿ ಎದೆನೋವು ಕಾಣಿಸಿಕೊಂಡಿತ್ತು, ಮನೇಯಲ್ಲಿಯೇ ಸ್ಥಳಿಯ ವೈಧ್ಯರನ್ನು ಕರೆಯಿಸಿ ಚೆಕ್ ಮಾಡಿಸಲಾಗಿತ್ತು, ನಂತರ ವೈದ್ಯರ ಸೂಚನೆಯ ಮೇರೆಗೆ ಬೆಳಗಿನ ಜಾವ ಶೋಭಾರವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುಲಾತ್ತಿತ್ತು ಆದರೆ ಆಸ್ಪತ್ರೆಗೆ ಹೋಗುವ ಮುನ್ನವೆ ಅವರು ಕೊನೆಯುಸಿರೆಳೆದ್ದಾರೆ.
ಮನಗುಂಡಿ ಎರಡನೇ ವಾರ್ಡಿನಿಂದ ಶೋಭಾ ಮಲ್ಲೇಶ ಹಡಪದ ಅವರು ಬಕೆಟ್ ಚಿಹ್ನೆಯೊಂದಿಗೆ ಚುನಾವಣೆ ಸ್ಪರ್ಧೆ ಮಾಡಿದ್ದರು, ಆದರೆ ಫಲಿತಾಂಶ ಬರುವ ಮುನ್ನವೇ ಈಗ ಅಭ್ಯರ್ಥಿಯು ಇಹಲೋಕ ತ್ಯಜಿಸಿದ್ದಾರೆ.
Kshetra Samachara
27/12/2020 01:14 pm