ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸ್ಕೂಟಿ ಏರಿ ಬಂದ ಗಜರಾಜ

ಧಾರವಾಡ: ಪ್ರಸಕ್ತ ವರ್ಷವೂ ಧಾರವಾಡದಲ್ಲಿ ಜಂಬೂ ಸವಾರಿ ಉತ್ಸವಕ್ಕೆ ಪರವಾನಿಗಿ ಸಿಕ್ಕಿಲ್ಲ. ಹೀಗಾಗಿ ಸರಳ ರೀತಿಯಲ್ಲಿ ದಸರಾ ಉತ್ಸವವನ್ನು ಆಚರಿಸಲಾಗುತ್ತಿದೆ. ಕಳೆದ ವರ್ಷ ಧಾರವಾಡದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು, ದಸರಾ ಉತ್ಸವಕ್ಕೆಂದು ತಮ್ಮ ಓಮಿನಿ ವಾಹನದಲ್ಲೇ ಆನೆಯ ಆಕೃತಿ ಮಾಡಿ ಗಮನಸೆಳೆದಿದ್ದರು.

ಈ ವರ್ಷ ಕೂಡ ಧಾರವಾಡದ ಗೌಳಿಗಲ್ಲಿಯ ಮಾರುತಿ ದೇವಸ್ಥಾನದವರು ದಸರಾ ಉತ್ಸವ ಮಾಡಲು ಆನೆ ತರಲು ಪರವಾನಿಗಿ ಕೇಳಿದ್ದರು. ಆದರೆ, ಅದಕ್ಕೆ ಅನುಮತಿ ಸಿಗದ ಕಾರಣ ಅವರು ಕಲಾವಿದ ಮಂಜುನಾಥ ಹಿರೇಮಠ ಅವರಿಗೆ ಕೃತಕ ಆನೆ ಸಿದ್ಧಪಡಿಸಲು ಹೇಳಿದ್ದರು.

ಆ ಪ್ರಕಾರ ಕಲಾವಿದ ಮಂಜುನಾಥ ಹಿರೇಮಠ ಅವರು, ತಮ್ಮ ಸ್ಕೂಟಿಯಲ್ಲೇ ಕೃತಕ ಆನೆಯೊಂದನ್ನು ಸಿದ್ಧಪಡಿಸಿ ದಸರಾ ಉತ್ಸವಕ್ಕೆ ಸಿದ್ಧಗೊಳಿಸಿದ್ದಾರೆ. ಈ ರೀತಿ ಸ್ಕೂಟಿಯಲ್ಲಿ ಸಿದ್ಧಗೊಂಡ ಆನೆ ಎಲ್ಲರ ಗಮನಸೆಳೆಯುತ್ತಿದೆ.

Edited By : Shivu K
Kshetra Samachara

Kshetra Samachara

14/10/2021 04:36 pm

Cinque Terre

39.55 K

Cinque Terre

4

ಸಂಬಂಧಿತ ಸುದ್ದಿ