ಪಬ್ಲಿಕ್ ನೆಕ್ಸ್ಟ್ ವಿಶೇಷ : ವಿನೋದ ಇಚ್ಚಂಗಿ
ನವಲಗುಂದ : ದೀಪಾವಳಿ ಅಂದ್ರೆ ಲಕ್ಷ್ಮಿ ಪೂಜೆ, ಲಕ್ಷ್ಮಿ ಪೂಜೆಗೆ ಪ್ರಮುಖ ಆಕರ್ಷಣೆ ಅಂದ್ರೇನೆ ಅದು ಹೂವು, ಹೂವುಗಳು ಎಷ್ಟು ಮೃದುವೋ ಈಗ ಅದೇ ಹೂವುಗಳು ನವಲಗುಂದದ ಗ್ರಾಹಕರ ಕೈ ಸುಡುವಷ್ಟು ದುಬಾರಿಯಾಗಿವೆ.
ಹೌದು ಒಂದೆಡೆ ಮಾರಾಟಗಾರರಿಗೆ ಹೂವಿನ ಬೆಳೆ ಕೈಗೆ ಸಿಗದೇ ಹೋದಂತಾದರೆ, ಇನ್ನೊಂದೆಡೆ ಕೊಳ್ಳುವವರ ಕೈ ಸುಡುವಷ್ಟು ದುಬಾರಿಯಾಗಿವೆ. ಈ ಭಾರಿ ಸುರಿದ ಬಾರಿ ಮಳೆಗೆ ಬೆಳೆದ ಹೂವು ಕೈಗೆ ಸಿಗದಂತಾದರೆ ಈ ಕಡೆ ಕೋವಿಡ್ ನಿಂದಾಗಿ ಹೂ ಬೆಳೆಗಾರರಿಗೆ ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ. ಮಾರುಕಟ್ಟೆಯಲ್ಲಿ ಹೂವುಗಳ ಕಲರವವಂತೂ ಮುಗಿಲು ಮುಟ್ಟಿದರು ಸಹ ಈಗಾಗಲೇ ಮಳೆಯಿಂದ ಹೂವಿನ ಬೆಳೆಯು ನಾಶವಾಗಿ ಬೆಲೆಯು ಸಹ ಗಗನಕ್ಕೆರಿದೆ.
ಹೀಗಾಗಿ ಚೆಂಡು ಹೂವು ಹಾಗೂ ಸೇವಂತಿಗೆ ಹೂವಿನ ಬೆಲೆ ಏರಿಕೆ ಕಂಡಿದ್ದು, ಗ್ರಾಹಕರಿಗೂ ಇದು ಸಂಕಷ್ಟ ತಂದೊಡ್ಡಿದೆ. ಇನ್ನೂ ಇದ್ದಷ್ಟು ಹೂವುಗಳನ್ನು ತಂದು ಮಾರಾಟ ಮಾಡಲು ಬೆಳೆಗಾರರು ಮುಂದಾದರೆ, ದರ ಹೆಚ್ಚಿರುವ ಕಾರಣ ಗ್ರಾಹಕರು ಕೊಳ್ಳಲು ಮುಂದಾಗುತ್ತಿಲ್ಲವಂತೆ, ಒಂದು ಕೆಜಿ ತೆಗೆದುಕೊಳ್ಳುವವರು ಅರ್ಧ ಕೆಜಿ ತೆಗೆದುಕೊಂಡು ಹೋಗ್ತಿದ್ದಾರಂತೆ, ಇನ್ನೂ ದರ ಹೆಚ್ಚಿಸದೇ ಹೋದ್ರೆ ಹೂ ಬೆಳೆಗಾರರು ಹೆಚ್ಚಿನ ನಷ್ಟಕ್ಕೆ ಸಿಲುಕಿಕೊಳ್ಳುವ ಭೀತಿಯಲ್ಲಿದ್ದಾರೆ. ಇನ್ನೂ ಈ ಬಗ್ಗೆ ಹೂ ವ್ಯಾಪಾರಸ್ಥರೊಬ್ಬರು ಪಬ್ಲಿಕ್ ನೆಕ್ಸ್ಟ್ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದು ಹೀಗೆ.
ಇನ್ನೂ ಈ ಬಾರಿ ದೀಪಾವಳಿ ಎಲ್ಲರನ್ನು ಎಲ್ಲಾ ಸಂಕಷ್ಟದಿಂದ ದೂರ ಮಾಡಿ, ಎಲ್ಲರ ಮನೆಯು ಬೆಳಗಲಿ ಅನ್ನೋದೇ ನಮ್ಮ ಆಶಯ.
Kshetra Samachara
15/11/2020 05:30 pm