ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ ಹಳೇ ಕುಡಿಯುವ ನೀರಿನ ಕೆರೆಗಿಲ್ಲ ರಕ್ಷಣೆ. ಎಲ್ಲೆಂದರಲ್ಲಿ ಸರಾಯಿ ಪ್ಯಾಕೆಟ್ ಗಳು

ಅಣ್ಣಿಗೇರಿ : ಪಟ್ಟಣದ ಮಧ್ಯ ಭಾಗದಲ್ಲಿರುವ ಪುರಾತನ ಕುಡಿಯುವ ನೀರಿನ ಕೆರೆಗೆ ಯಾವುದೇ ರಕ್ಷಣೆ ಇಲ್ಲದೆ ಕುಡುಕರ ತಾಣವಾಗಿ ಪರಿವರ್ತನೆ ಆಗಿದೆ.

ಸ್ಥಳೀಯ ಕೆರೆ ರಕ್ಷೆಣೆಗೆಂದೇ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಪುರಾತನ ಕೆರೆ.

ಬಾವಿಗಳನ್ನು ರಕ್ಷಣೆ ಮಾಡಲು ಸರ್ಕಾರದ ನಿಯಮ ಇದ್ದರೂ ಕೂಡಾ ಸ್ಥಳೀಯ ಅಧಿಕಾರಿಗಳು ಇದರ ಕಡೆ ಗಮನ ಹರಿಸದೆ ಇದ್ದರಿಂದ ಕುಡುಕರ ತಾಣವಾಗಿ ಬಿಟ್ಟಿರುವುದು ದುರದುಷ್ಟಕರ ಸಂಗತಿಯಾಗಿದೆ.

ಸಂಜೆ ಆದರೆ ಸಾಕು ಕೆರೆ ದಂಡೆಯ ಮೇಲೆ ಕುಡುಕರ ಚೆಲ್ಲಾಟ ಆರಂಭ ಆಗುತ್ತದೆ. ಪ್ರತಿ ದಿನ ಕೆರೆಯ ದಂಡೆ ಮೇಲೆ ಬಿದ್ದ ಸರಾಯಿ ಪ್ಯಾಕೆಟ್ ಗಳನ್ನು ನೋಡಿ ಮಹಿಳೆಯರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಉದ್ಭವವಾಗಿದೆ.

ಇನ್ನೂ ಮುಂದಾದರು ಸಂಭಂದಪಟ್ಟ ಅಧಿಕಾರಿಗಳು ಈ ಪುರಾತನ ಕೆರೆಗೆ ರಕ್ಷಣೆ ನೀಡಿ ಕಾಪಾಡ ಬೇಕೆಂದು ಸ್ಥಳೀಯರು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

20/09/2020 07:53 pm

Cinque Terre

28.19 K

Cinque Terre

0

ಸಂಬಂಧಿತ ಸುದ್ದಿ