ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ
ಹುಬ್ಬಳ್ಳಿ: ವಯಸ್ಸಾಯ್ತು ಇನ್ನೇನು ಸಾಧನೆ ಮಾಡಲು ಸಾಧ್ಯ ಎಂದು ಗೊಣಗುವವರಿಗೆ ಈ ವ್ಯಕ್ತಿ ವಿಭಿನ್ನ. ಐವತ್ತರ ವಯಸ್ಸಿನಲ್ಲೂ ಆಫ್ರಿಕಾದ ಅತೀ ದೊಡ್ಡ ಶಿಖರ ಕಿಲಿಮಾಂಜರೋ ಪರ್ವತ ಚಾರಣ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈ ಸಾಹಸಿ ಕನ್ನಡಿಗ ಶಿಖರದ ತುದಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ.
ಹೀಗೆ ದಕ್ಷಿಣ ಆಫ್ರಿಕಾ ದೇಶದ ಶಿಖರದ ಮೇಲೆ ನಮ್ಮ ಭಾರತ ದೇಶದ ತ್ರಿವರ್ಣ ಧ್ವಜವನ್ನು ಹಾರಿಸುತ್ತಿರುವ ಇವರ ಹೆಸರು ಗಿರೀಶ ಹುಲ್ಲೂರ. ಮೂಲತಃ ಹುಬ್ಬಳ್ಳಿ ನಿವಾಸಿಯಾದ ಇವರು, 75 ನೇ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾವನ್ನು ವಿಶ್ವದಲ್ಲೇ ಅತಿ ಎತ್ತರದಲ್ಲಿರುವ ಕಿಲಿಮಾಂಜರೋ ಪರ್ವತದ ಮೇಲೆ ಹಾರಿಸುವ ಮೂಲಕ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಹೆಮ್ಮೆ ತಂದಿದ್ದಾರೆ.
ಇನ್ನು ಗಿರೀಶ ಹುಲ್ಲೂರ ಅವರು ದೇಶ ಪ್ರೇಮದ ಜೊತೆಗೆ ಪರಿಸರ ಪ್ರೇಮಿಯೂ ಕೂಡ. ಇವರು ಬೈಕ್ ರೈಡ್ ಮೂಲಕ ಪಯಣ ಆರಂಭಿಸಿದ್ದು, ತಾಂಜಾನಿಯಾದ ಮಳೆ ಕಾಡಿನಿಂದ ಆಗಸ್ಟ್ 13ರಿಂದ ಪರ್ವತಾರೋಹಣ ಆರಂಭ ಮಾಡಿದ್ದಾರೆ. ಆಗಸ್ಟ್ 19ರ ಬೆಳಿಗ್ಗೆ 7.45ಕ್ಕೆ ಪರ್ವತದ ತುತ್ತ ತುದಿಗೆ ತಲುಪಿ ನಮ್ಮ ಭಾರತ ಮಾತೆಯ ಧ್ವಜವನ್ನು ಹಾರಾಡಿಸಿದ್ದಾರೆ. ಐವತ್ತರ ವಯಸ್ಸಿನಲ್ಲೂ ಈ ರೀತಿ ಸಾಧನೆ ಮಾಡಿದ ಗಿರೀಶ್ ಕುಟುಂಬ ಸಂತಸ ವ್ಯಕ್ತಪಡಿಸಿದ್ದಾರೆ.
ಹೀಗೆ ಪರ್ವತಾರೋಹಣ ಮಾಡಿ, ಮಕ್ಕಳನ್ನು ಗ್ಯಾಜೆಟ್ ಪ್ರಿಯರನ್ನಾಗಿ ಮಾಡುವ ಬದಲು, ಪರಿಸರದ ಬಗ್ಗೆ ಒಲವು ಬೆಳೆಸಿಕೊಳ್ಳಲು ಪಾಲಕರು ಪ್ರೇರೇಪಿಸಬೇಕೆಂದು ಸಂದೇಶ ಸಾರಿದ ಗಿರೀಶ್ ಅವರಿಗೆ ಹುಬ್ಬಳ್ಳಿ ಜನರು ಅಭಿನಂದನೆ ಸಲ್ಲಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/09/2022 06:31 pm