ಹುಬ್ಬಳ್ಳಿ : ಡೆಡ್ಲಿ ಕೊರೊನಾ ಮಧ್ಯೆ ಜಡಿ ಮಳೆ ನಡುವೆಯೂ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ನೌಕರನ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು.
ಧೋ ಎಂದು ಮಳೆ ಸುರಿಯುವ ವೇಳೆ ವಿದ್ಯುತ್ ವ್ಯತ್ಯಯವಾಗುತ್ತಿದ್ದಂತೆ ಜನ ಹೆಸ್ಕಾಂ ನ್ನು ಶಪಿಸದೆ ಇರಲಾರರು. ಸುರಿಯುವ ಮಳೆಯಲ್ಲಿಯೇ ಕರೆಂಟ್ ತೆಗೆದರಲ್ಲಾ ಎಂದು ಕೆಂಡಾಮಂಡಲರಾಗುತ್ತಾರೆ. ಯಾರೊಬ್ಬರು ಈ ಮಳೆಯಲ್ಲಿ ವಿದ್ಯುತ್ ಕೆಲಸ ಮಾಡುವುದು ಹೇಗೆ ಎನ್ನುವ ಒಂದು ಸಣ್ಣ ಯೋಚನೆಯನ್ನು ಮಾಡಲ್ಲ.
ಇದೆಲ್ಲವನ್ನು ಮನಗಂಡ ನಮ್ಮ ಕೆಇಬಿ ನೌಕರರು ಮಳೆ ಚಳಿ ಎನ್ನದೇ ಕೆಲವೊಮ್ಮೆ ತಮ್ಮ ಪ್ರಾಣವನ್ನೇ ಪಣಕಿಟ್ಟು ಕೆಲಸ ಮಾಡುವ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ.
ಇದಕ್ಕೇ ಸಹಿ ಸಾಕ್ಷಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ನೌಕರ ಶ್ರೀನಿವಾಸ ಕಿತ್ತೂರ. ಹೌದು ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದಲ್ಲಿ ಸತತ ಮಳೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ಈ ಸಮಸ್ಯೆಯನ್ನು ಸರಿಪಡಿಸುವಲ್ಲಿ ಶ್ರೀನಿವಾಸ ಕಿತ್ತೂರ ಕೈಗೊಂಡ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು. ಗ್ರಾಮಸ್ಥರ ಸಹಾಯದಿಂದ ಜೆ.ಸಿ ಬಿ.ಮೂಲಕ ಸಾಹಸದ ರೀತಿಯಲ್ಲಿ ಶ್ರೀವಾಸ ಅವರು ವಿದ್ಯುತ್ ಸಮಸ್ಯೆಯನ್ನು ಸರಿಪಡಿಸುತ್ತಿರುವ ದೃಶ್ಯ ನಿಜಕ್ಕೂ ಎದೆ ಝಲ್ ಎನ್ನುವಂತಿದೆ.
Kshetra Samachara
06/10/2020 09:43 pm