ಹುಬ್ಬಳ್ಳಿ: ಅದೆಷ್ಟೋ ಸಾಧಕರ ತವರೂರಾದ ಹುಬ್ಬಳ್ಳಿಯಲ್ಲೊಬ್ಬ ಅಪ್ರತಿಮ ಸಾಧಕ ತನ್ನಲ್ಲಿರುವ ಕಲೆಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹುಬ್ಬಳ್ಳಿ ಹೆಸರನ್ನು ಅಚ್ಚೊತ್ತಿದ್ದಾನೆ.ಅದೇನು ಸಾಧನೆ ಅಂತೀರಾ ತೋರಸ್ತೀವಿ ನೋಡಿ...
ಹೀಗೆ ದೇಹದಲ್ಲಿ ಎಲುಬುಗಳ ಇದೆಯೋ ಇಲ್ಲವೋ ಎನ್ನುವಂತೆ ತನ್ನ ದೇಹವನ್ನು ಬಾಗಿಸಿ ಬಳುಕಿಸುವ ಮೂಲಕ ಯೋಗಾಸನ ಮಾಡುತ್ತಿರುವ ವ್ಯಕ್ತಿ ಹೆಸರು ವಿನಾಯಕ ಕೊಂಗಿ ಮೂಲತಃ ಹುಬ್ಬಳ್ಳಿಯ ಆನಂದನಗರ ನಿವಾಸಿ.ತಮ್ಮ47ನೇ ವಯಸ್ಸಿನಲ್ಲೇ ಯೋಗದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ.
ಸೌಥ್ ಕೋರಿಯಾ, ರಾಂಚಿ, ಝಾರ್ಕಂಡ್, ಪಟಿಯಾಲ್, ದೆಹಲಿ, ರಾಜಸ್ಥಾನ, ಬೆಂಗಳೂರು ಸೇರಿದಂತೆ ದೇಶದ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಯೋಗಾಸನದ ಮೋಡಿಯ ಮೂಲಕ ಸಾಕಷ್ಟು ಬಹುಮಾನ ಹಾಗೂ ಪುರಸ್ಕಾರ ಮುಡಿಗೇರಿಸಿಕೊಂಡಿದ್ದಾರೆ.32 ಕ್ಕೂ ಹೆಚ್ಚು ಬಹುಮಾನಗಳಿಗೆ ಭಾಜನರಾದ ವಿನಾಯಕ ಕೊಂಗಿ ತಮ್ಮ ದೇಹವನ್ನು ಹೇಗೆ ಬೇಕೋ ಹಾಗೇ ಸಲಿಸಾಗಿ ಬಾಗಿಸಿ 47ನೇ ವಯಸ್ಸಿನಲ್ಲಿ ಮಾಡಲು ಅಸಾಧ್ಯವಾದ ಆಸನಗಳನ್ನು ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ವೃಕ್ಷಾಸನ, ಪಶ್ಚಿಮೊತ್ಥಾಸನ, ಉಷ್ಟ್ರಾಸನ, ಭದ್ದಪದ್ಮಾಸನ, ಆಕರ್ಣ ಧನುರಾಸನ, ಅರ್ಧ ಮತ್ಸ್ಯೇಂದ್ರಾಸನ, ಹಲಾಸನಾ,ಮತ್ಸ್ಯಾಸನ, ಚಕ್ರಾಸನ,ಧನುರಾಸನ,ತ್ರೀಕೊನಾಸನ, ಏಕಪಾದ ರಾಜಕಪೂಥಾಸನ,ವಿಶ್ವಾಮಿತ್ರಾಸನ,ಕಾಲಭೈರವಾನ,ವಿಶಿಷ್ಟಾಸನ,ಕಶ್ಯಪಾಸನ,ಸ್ವಸ್ಥಿಕಾಸನ,ಓಂಕಾರಾಸನ,ಪದ್ಮಭಕಾಸನ,ಹನುಮಾನಾಸನ ಸೇರಿದಂತೆ ಹಲವಾರು ಯೋಗಾಸನದ ಭಂಗಿಗಳನ್ನು ಮಾಡುವ ವಿನಾಯಕ ಅವರು ವರನಟ ಡಾ.ರಾಜಕುಮಾರ್ ಅವರ ಕಾಮನಬಿಲ್ಲು ಸಿನಿಮಾದಿಂದ ಪ್ರೇರಿತರಾಗಿ ಯೋಗ ಸಾಧನೆ ಮಾಡುತ್ತಿದ್ದಾರೆ.
Kshetra Samachara
24/09/2020 07:06 pm