ನವಲಗುಂದ : ಕಳ್ಳಭಟ್ಟಿ ಸಾರಾಯಿ ನಿರ್ಮೂಲನ ಅಭಿಯಾನದಲ್ಲಿ ನವಲಗುಂದ ಅಬಕಾರಿ ಇಲಾಖೆ ವಲಯ ವ್ಯಾಪ್ತಿಯ ಅಣ್ಣಿಗೇರಿ ಪಟ್ಟಣದ ಹರಣಶಿಕಾರಿ ಕಾಲೋನಿಯಲ್ಲಿ ಕಳ್ಳಭಟ್ಟಿ ತಯಾರಿಕೆ ಸಾಗಾಟ ಹಾಗೂ ಮಾರಾಟ ಮಾಡುವ ವೃತ್ತಿಯಲ್ಲಿ ತೊಡಗಿದ್ದ ವ್ಯಕ್ತಿಗಳಿಗೆ ಉದ್ಯೋಗ ಅವಕಾಶದ ತರಬೇತಿ ನೀಡಲಾಗಿದೆ.
ಹೌದು ಕಳ್ಳಭಟ್ಟಿ ತಯಾರಿಕೆ ಸಾಗಾಟ ಹಾಗೂ ಮಾರಾಟ ಮಾಡುವ ವೃತ್ತಿಯಲ್ಲಿ ತೊಡಗಿದ್ದ ವ್ಯಕ್ತಿಗಳಿಗೆ ಉದ್ಯೋಗ ಅವಕಾಶವನ್ನು ಹಾಗೂ ಜೀವನಅವಕಾಶವನ್ನು ಕಲ್ಪಿಸುವ ಉದ್ದೇಶದಿಂದ ಅಬಕಾರಿ ನಿರೀಕ್ಷಕರ ಕಚೇರಿ ನವಲಗುಂದ ವಲಯ ದಿಂದ 35 ಜನರಿಗೆ ಹೈನುಗಾರಿಕೆ ಉದ್ಯೋಗ ತರಬೇತಿ ನೀಡಿದ್ದಾರೆ.
ನವಲಗುಂದ ವಲಯದಿಂದ ಧಾರವಾಡದಲ್ಲಿ 30 ಜನ ಮಹಿಳೆಯರು ಹಾಗೂ 5 ಜನ ಪುರುಷರು ಸೇರಿ ಒಟ್ಟು 35 ಜನ ಆಧುನಿಕ ಹೈನುಗಾರಿಕೆ, ಕುರಿ, ಮೇಕೆ ಸಾಗಣಿಕೆ ಕುರಿತು ಎರಡು ದಿನ ತರಬೇತಿ ಪಡೆದುಕೊಂಡಿದ್ದಾರೆ.
Kshetra Samachara
29/05/2022 08:05 am