ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ವಿದ್ಯಾರ್ಥಿನಿಗೆ ಕೈ ತುತ್ತು ಕೊಟ್ಟ ಟೀಚರ್: ಮಾತೃಹೃದಯಕ್ಕೆ ಸಾಕ್ಷಿಯಾದ ದೃಶ್ಯ ಎಲ್ಲೆಡೆ ವೈರಲ್

ಕುಂದಗೋಳ : ಸರ್ಕಾರಿ ಶಾಲೆ ಅಂದ್ರೆ ಹಾಗೆ ಮಕ್ಕಳೊಡನೆ ಶಿಕ್ಷಕರು ಸರಾಗವಾಗಿ ಬೆರೆತು ಮಕ್ಕಳಾಗಿ ಬಿಡ್ತಾರೆ. ಹಾಗೇ ಸಮಯ ಬಂದ್ರೇ ತಾಯಿ ಸ್ಥಾನ ತುಂಬುತ್ತಾರೆ.

ಅಂದಹಾಗೇ ಈಗ್ಯಾಕೆ ಈ ವಿಷಯ ಅಂದ್ರಾ ? ಇಲ್ಲೊಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿಯೊಬ್ಬರು ಜನ ಮೆಚ್ಚುವ ಕೆಲಸವನ್ನು ಶಾಲೆಯಲ್ಲಿ ಮಾಡಿದ್ದಾರೆ. ಹೌದು, ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಜಾನಕಿಯವರು ಅದೇ ಶಾಲೆಯ ವಿದ್ಯಾರ್ಥಿನಿ ದಿವ್ಯಾ ಕುರವತ್ತಿಮಠಗೆ ಕೈ ತುತ್ತು ತಿನಿಸಿದ್ದಾರೆ.

ಎಂದಿನಂತೆ ಎಲ್ಲಾ ಮಕ್ಕಳು ಬಿಸಿಯೂಟ ಸವಿಯುವ ವೇಳೆ ದಿವ್ಯಾ ಕೈ ಗಾಯ ಮಾಡಿಕೊಂಡು ಸುಮ್ನೆ ಕೂತಿದ್ದಾಳೆ. ಇದನ್ನು ಗಮನಿಸಿದ ಶಿಕ್ಷಕಿ ಜಾನಕಿ ಉಪಾಧ್ಯಾಯ ತಾವೇ ಸ್ವತಃ ಬಂದು ಮಗುವಿಗೆ ಕೈ ತುತ್ತು ನೀಡಿ ಶಿಕ್ಷಣದ ಜೊತೆ ಮಾತೃಪ್ರೇಮ ಸಹ ನೀಡಿದ್ದಾರೆ.

ಮಗುವಿಗೆ ಶಿಕ್ಷಕರು ಊಟ ಮಾಡಿಸುವ ವೀಡಿಯೋ ಸ್ಥಳೀಯರು ಸೆರೆ ಹಿಡಿದಿದ್ದು, ಇದೀಗ ಎಲ್ಲೆಡೆ ವೈರಲ್ ಆಗಿ ಮೆಚ್ಚುಗೆಗೂ ಪಾತ್ರವಾಗಿದೆ.

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/07/2022 01:06 pm

Cinque Terre

90.68 K

Cinque Terre

4

ಸಂಬಂಧಿತ ಸುದ್ದಿ