ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಂಧಮಕ್ಕಳ ಬಾಳಿಗೆ ಬೆಳಕಾದ ಸಾಧಕ ಶಿವಾನಂದ: ಅಸಾಧ್ಯವನ್ನು ಸಾಧಿಸಿದವರಿಗೆ ಒಂದು ಸಲಾಂ!

ಪಬ್ಲಿಕ್ ನೆಕ್ಸ್ಟ್ ವಿಶೇಷ ಮಲ್ಲೇಶ್ ಸೂರಣಗಿ

ಹುಬ್ಬಳ್ಳಿ/ಗದಗ: ಆತ ಅಂತರಾಷ್ಟ್ರೀಯ ಯೋಗ ಪಟು. ಏನಾದರೂ ಸಾಧನೆ ಮಾಡಬೇಕು ಅಂದುಕೊಂಡಿದ್ದ ಆತ ಸಾಮಾಜಿಕ ಕಾರ್ಯದ ಮೂಲಕ ಬಹುದೊಡ್ಡ ಸಾಧನೆಯನ್ನೇ ಮಾಡಿದ್ದಾನೆ. ನೂರಾರು ಅಂಧ ಮಕ್ಕಳ ಬಾಳಿಗೆ ಬೆಳಕಾಗಿದ್ದಾನೆ. ಆತನ ಸಾಧನೆ ನೋಡಿದರೇ ನಿಜಕ್ಕೂ ನೀವು ಅಚ್ಛರಿ ಪಡುವುದು ಖಂಡಿತ. ಹಾಗಿದ್ದರೇ ಯಾರು ಆ ಸಾಧಕ ಅಂತೀರಾ ? ಈ ಸ್ಟೋರಿ ನೋಡಿ.

ಹೀಗೆ ಒಂಟಿಗಂಬದ ಮೇಲೆ ನಾನಾ ಕಸರತ್ತುಗಳನ್ನು ಮಾಡುತ್ತಿರುವ ಅಂಧ ಬಾಲಕರು. ದೇಶವೇ ಇವರ ಸಾಧನೆಯನ್ನು ನೋಡಿ ಕೊಂಡಾಡುತ್ತಿದ್ದರೂ ಜಗತ್ತನ್ನೇ ಕಾಣದ ನತದೃಷ್ಟರು. ಈ ಎಲ್ಲ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಗದಗ ಜಿಲ್ಲೆಯ ಹೊಳೆಆಲೂರಿನ ಜ್ಞಾನಸಿಂಧು ಶಾಲೆ. ಹೌದು. ಅಂತರರಾಷ್ಟ್ರೀಯ ಯೋಗಪಟು ಶಿವಾನಂದ ಕೇಲೂರು ಅವರು ತಮ್ಮ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದುಕೊಂಡಿದ್ದವರು.

ಆದರೆ ಅಂಧ ಮಕ್ಕಳನ್ನೇ ತನ್ನ ಸಾಧನೆಯ ಅಸ್ತ್ರವನ್ನಾಗಿ ಮಾಡಿಕೊಂಡು ಈಗ ಜ್ಞಾನಸಿಂಧು ಶಾಲೆಯ ಮೂಲಕ ಅಂಧ ಮಕ್ಕಳ ಪ್ರತಿಭೆಯ ಅನಾವರಣ ಮಾಡಲು ಮುಂದಾಗಿದ್ದಾರೆ. ತಾಯಿ ತುಳಸಮ್ಮ ಕೇಲೂರು ಅವರು ಮಾರ್ಗದರ್ಶನದಲ್ಲಿ ಹಾಗೂ ಗದಗಿನ ಪುಟ್ಟರಾಜ ಗವಾಯಿಗಳ ಆಶೀರ್ವಾದೊಂದಿಗೆ ಶಿವಾನಂದ ಅವರು ಅಂಧಮಕ್ಕಳಿಗೆ ಮಲ್ಲಕಂಬ, ಯೋಗ ಸೇರಿದಂತೆ ಅಸಾಧ್ಯ ಎಂಬುವಂತ ಸವಾಲುಗಳನ್ನು ಎದುರಿಸುವ ಮೂಲಕ ಮಹತ್ವದ ಕಾರ್ಯವನ್ನು ಮಾಡಿದ್ದಾರೆ.

ಇನ್ನೂ ಇವರೆಲ್ಲರೂ ಹುಟ್ಟುತ್ತಲೇ ಅಂಧತ್ವ ಇರುವ ದಿವ್ಯಾಂಗರು. ಆದ್ರೇ, ಇವರೂ ಸಹ ಮಲ್ಲಕಂಬದ ಮೇಲೆ ಇಂಥ ಸಾಧನೆ ಮಾಡಬಹುದು ಅಂತ ತೋರಿಸಿಕೊಟ್ಟಿದಾರೆ ಮಕ್ಕಳಿಗೆ ಈ ವಿದ್ಯೆ ಹೇಳಿಕೊಟ್ಟ ಗುರು ಶಿವಾನಂದ. ವಿದ್ಯೆ ಸುಮ್ಮನೇ ಯಾರಿಗೂ ಒಲಿಯೋದಿಲ್ಲ. ಅದಕ್ಕೆ ತಪ್ಪಸ್ಸು ಬೇಕು ಆವಾಗಲೇ ಅದು ಸಿದ್ಧಿಸೋಕೆ ಸಾಧ್ಯ. ಆದ್ರೇ, ವಿಷಯ ಏನಂದರೇ ಕೈ-ಕಾಲು-ಕಣ್ಣು ಇದ್ದವರೇನೋ ಹೇಳಿಕೊಟ್ಟ ಹಾಗೇ ಮಾಡಿ ಬಿಡಬಹುದು. ಆದರೆ ದಿವ್ಯಾಂಗ ಮಕ್ಕಳಿಗೆ ಮಲ್ಲಕಂಬದಂತ ಸಾಹಸಗಳನ್ನ ಹೇಳಿಕೊಡೋದು ಸುಲಭವಲ್ಲ.

ಒಂದಲ್ಲಾ ಎರಡಲ್ಲ ಬರೋಬ್ಬರಿ 12 ವರ್ಷಗಳಿಂದ ಈ ಮಕ್ಕಳಿಗೆ ಯೋಗ ವಿದ್ಯೆಯನ್ನ ಧಾರೆ ಎರೆದಿದಾರೆ ಯೋಗಿ ಶಿವಾನಂದ ಕೇಲೂರು. ಅದಕ್ಕಾಗಿ ಸಾಕಷ್ಟು ಶ್ರಮವಹಿಸಿದಾರೆ. ಸತತ ಪ್ರಯತ್ನ ಮಾಡಿದ್ದರಿಂದಾಗಿ ಮಕ್ಕಳು ಸಾಧನೆ ಮಾಡುತ್ತಾ ಎಲ್ಲರನ್ನೂ ಚಕಿತಗೊಳಿಸುತ್ತಿದ್ದಾರೆ. ಅಷ್ಟೇ ಅಲ್ಲ, ಮಲ್ಲಕಂಬದಲ್ಲಿ ಈ ರೀತಿ ಸಾಧನೆ ಮಾಡ್ತಾನೇ ದಿವ್ಯಾಂಗರು ಹೊಸದೊಂದು ರೆಕಾರ್ಡ್ ಮಾಡಿದಾರೆ. ರಾಜ್ಯದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲಿಯೇ ಯಾರೂ ಮಾಡದ ಸಾಧನೆಯನ್ನು ಈ ಎಳೆ ವಯಸ್ಸಿನಲ್ಲೇ ಇವರೆಲ್ಲ ಮಾಡಿದ್ದಾರೆ.

ಒಟ್ಟಿನಲ್ಲಿ ಶಿವಾನಂದ ಕೇಲೂರು ತಾಳ್ಮೆ, ಪರಿಶ್ರಮವನ್ನು ಮೆಚ್ಚಲೇಬೇಕು. ಬರೀ ದೇಶದಲ್ಲಷ್ಟೇ ಅಲ್ಲ, ಇವರೆಲ್ಲರ ಪ್ರತಿಭೆ ಈಗ ವಿದೇಶಗಳಲ್ಲೂ ಹರಡಿದೆ. ಯೋಗಿ ಬಾಬಾ ರಾಮದೇವ್, ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸನ್ಯಾಸಿಗಳು, ಯೋಗಿಗಳು, ಅನುಭಾವಿಗಳು ಮಕ್ಕಳ ಪ್ರತಿಭೆ ಕಂಡು ಮೂಕವಿಸ್ಮಿತರಾಗಿದಾರೆ.ರಾಷ್ಟ್ರಪತಿ ಭವನದ ಮುಂದೆ ತಮ್ಮ ಯೋಗ ವಿದ್ಯೆಯನ್ನ ಈ ಮಕ್ಕಳು ಅನಾವರಣ ಮಾಡಿ ನಾಡಿನ ಕೀರ್ತಿಯನ್ನ ಎತ್ತರಕ್ಕೆ ಕೊಂಡೊಯ್ದಿದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/06/2022 05:29 pm

Cinque Terre

89.29 K

Cinque Terre

2

ಸಂಬಂಧಿತ ಸುದ್ದಿ