ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಕೊವೀಡ್-19 : ಸ್ಪೀಡ್ ಕಳೆದುಕೊಂಡ ಸ್ಪೀಡ್ ಪೋಸ್ಟ್

ಕಲಘಟಗಿ : ಕೊವೀಡ್-19 ಹಲವು ರಂಗಗಳ ಮೇಲೆ ಪರಿಣಾಮ ಬೀರಿದೆ,ಈಗ ಅಂಚೆ ಸೇವೆಯ ಮೇಲೂ ಕೊರೊನಾ ಪರಿಣಾಮ ಬೀರಿದ್ದು,ಅಂಚೆ ಸೇವೆಗಳಾದ ಪಾರ್ಸಲ್ ಹಾಗೂ ಸ್ಪೀಡ್ ಪೋಸ್ಟ್ ತಲಪುವುದು ನಿಧಾನವಾಗುತ್ತಿದೆ. ಜನಸಾನಾನ್ಯರ ಭರವಸೆಯ ಅಂಚೆ ಸೇವೆಯು ಕೊರೊನಾ ದಿಂದಾಗಿ ನಿಧಾನವಾಗಿದೆ.

ಅಂಚೆ ಪತ್ರಗಳು,ಪಾರ್ಸಲ್,ಸ್ಪಿಡ್ ಪೋಸ್ಟ್ ತಲುಪಲು ವಿಳಂಬವಾಗುತ್ತಿದೆ. ವಿಮಾನ ಹಾಗೂ ರೈಲು ಹಾರಾಟವನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸದೇ,ನಿರ್ಬಂಧಿಸಲಾಗಿದೆ ಹಾಗೂ ಕೊವೀಡ್-19 ರ ಕಾರಣ ಅಂಚೆ ಸೇವೆ ನಿಧಾನವಾಗಿದೆ.

ಈಗ ರಾಜ್ಯದಲ್ಲಿ ನಡೆದ ಸಾರಿಗೆ ನೌಕರರ ಮುಷ್ಕರದಿಂದಲೂ ಅಂಚೆ ಸೇವೆಗೆ ಪೆಟ್ಟು ಬಿದ್ದಿದೆ. ಅಂಚೆ ಸೇವೆ ಮತ್ತೆ ತ್ವರಿತ ಸೇವೆಗೆ ಮುಂದಾಗಾಲು ಇನ್ನೇಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡ ಬೇಕಿದೆ.

Edited By :
Kshetra Samachara

Kshetra Samachara

14/12/2020 04:27 pm

Cinque Terre

26.52 K

Cinque Terre

0

ಸಂಬಂಧಿತ ಸುದ್ದಿ