ಅಣ್ಣಿಗೇರಿ : ಪಟ್ಟಣದ ಮಧ್ಯಭಾಗದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ ಎಟಿಎಂ ಕೇಂದ್ರ ಇದ್ದು ಇಲ್ಲದಂತೆ ಕಾರ್ಯನಿರ್ವಹಿಸುತ್ತಿರುವದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಶನಿವಾರ ಹಾಗೂ ಭಾನುವಾರದಂದು ಸರ್ಕಾರಿ ರಜೆ ಇದ್ದರಿಂದ ಸಾರ್ವಜನಿಕರ ಓಡಾಟ ಹೆಚ್ಚಾಗಿರುತ್ತದೆ. ವಾರದ ಸಂತೆ ಮಾಡಲು ಸುತ್ತಮುತ್ತಲಿನ ಗ್ರಾಮಸ್ಥರು ಪಟ್ಟಣಕ್ಕೆ ಎಟಿಎಂ ನಂಬಿ ಬಂದು ಮರಳಿ ಹೋಗುವ ದೃಶ್ಯ ಎರಡು ದಿನದಿಂದ ಪಟ್ಟಣದಲ್ಲಿ ಕಂಡು ಬರುತ್ತಿದೆ.
ಎಟಿಎಂ ಕೇಂದ್ರ ಅರ್ಧ ಬಾಗಿಲು ತೆರೆದು ಮಶಿನ ಮೇಲೆ ಹಣ ಇಲ್ಲ ಅಂತಾ ನಾಮಫಲಕ ಅಳವಡಿಸಿದ್ದಾರೆ. ಎಟಿಎಂ ನಲ್ಲಿ ಹಣ ಇಲ್ಲದಿದ್ದರೆ ಎಟಿಎಂ ಕೇಂದ್ರವನ್ನು ಸಂಪೂರ್ಣವಾಗಿ ಬಾಗಿಲು ಮುಚ್ಚಿ ಎಂದು ಹೇಳುತ್ತಿದ್ದಾರೆ.
ಬ್ಯಾಂಕ್ ಕೆಳಗಡೆ ಇರುವ ಮಿನಿ ಎಟಿಎಂ ಕೇಂದ್ರಕ್ಕೆ ಹೋದರೆ ಕಮಿಷನ್ ನೀಡಿದರೂ ಕೂಡಾ ಪ್ರತಿಯೊಬ್ಬರಿಗೆ ಎರಡು ಸಾವಿರ ಮಾತ್ರ ಹಣ ನೀಡುತ್ತಿರುವುದು ಸಾರ್ವಜನಿಕರಿಗೆ ಮತ್ತಷ್ಟು ಆತಂಕಕ್ಕೆ ಒಳಪಡಿಸಿದೆ. ಇನ್ನೂ ಮುಂದಾದರು ಸಂಭಂದಿಸಿದ ಬ್ಯಾಂಕ್ ಅಧಿಕಾರಿಗಳು ಕೂಡಲೆ ಎಟಿಎಂ ಗೆ ಹಣ ಹಾಕಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು ಎಂದು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.
Kshetra Samachara
13/12/2020 07:19 pm