ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಸ್ ಸಂಚಾರ ಹೆಚ್ಚಿದರೂ ಆದಾಯದ ಅಷ್ಟಕಷ್ಟೆ; ವಾಯುವ್ಯ ಸಾರಿಗೆ ಸಂಸ್ಥೆ ಆರ್ಥಿಕ ಸಂಕಷ್ಟ

ಹುಬ್ಬಳ್ಳಿ: ಲಾಕ್ ಡೌನ್ ಸಂಪೂರ್ಣ ತೆರವುಗೊಳಿಸಿದ ನಂತರ ಜನಜೀವನ ಸಹಜ ಸ್ಥಿತಿಯತ್ತ ಮರಳಿದರೂ ಕೂಡ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅನುಸೂಚಿಗಳನ್ನು ಅನುಸರಿಸಲು ಸಾಧ್ಯವಾಗುತ್ತಿಲ್ಲ.ಬಸ್ ಸಂಚಾರ ಹೆಚ್ಚಿದರೂ ಕೂಡ ಆದಾಯ ಅಷ್ಟಕಷ್ಟೆ ಎಂಬುವಂತಾಗಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಬಸ್ ಸಂಚಾರ ಹೆಚ್ಚಿದರೂ ಕೂಡ ಆದಾಯದಲ್ಲಿ ಮಾತ್ರ ಕೋವಿಡ್ ಪೂರ್ವದ ಆದಾಯವನ್ನು ತಲುಪಲು ಸಾಧ್ಯವಾಗುತ್ತಿಲ್ಲ.ಆರ್ಥಿಕ ಸಂಕಷ್ಟದಲ್ಲಿ ನಲಗುತ್ತಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಕೋವಿಡ್ ಚೇತರಿಸಿಕೊಳ್ಳಲಾಗದಂತ ಹೊಡೆತ ಕೊಟ್ಟಿದೆ.

ಈಗಾಗಲೇ ಅಂತರರಾಜ್ಯ ಬಸ್ ಸಂಚಾರ ಕೂಡ ಪ್ರಾರಂಭವಾಗಿದ್ದು,ಜನರಲ್ಲಿರುವ ಭಯ ಮಾತ್ರ ಕಡಿಮೆಯಾಗಿಲ್ಲ.ಈ ಹಿನ್ನೆಲೆಯಲ್ಲಿ ಬಸ್ ಸಂಚಾರದ ಪ್ರಮಾಣ ಹೆಚ್ಚಿದರೂ ಕೂಡ ಆದಾಯದಲ್ಲಿ ಮಾತ್ರ ಚೇತರಿಕೆ ಕಂಡಿಲ್ಲ.

ಈ ಮೊದಲು 30% ಹಾಗೂ 50% ಜನರಿಗೆ ಸಂಚಾರಕ್ಕೆ ಅನುಮತಿ ನೀಡಿತ್ತು.ಆದರೇ ಈಗ ಬಸ್ ಗಳಲ್ಲಿ ನೂರರಷ್ಟು ಜನರು ಸಂಚರಿಸುತ್ತಿದ್ದರೂ ಕೂಡ ಆದಾಯದಲ್ಲಿ ಚೇತರಿಕೆ ಕಂಡಿಲ್ಲ.

ನವೆಂಬರ್ ದಾಖಲೆಯ ಆಧಾರದ ಮೇಲೆ ಶೇ.70% ರಷ್ಟು ಆದಾಯವನ್ನು ತಲುಪಲು ಸಾಧ್ಯವಾಗಿದ್ದು,ಕೊವೀಡ್ ಪೂರ್ವದ ಆದಾಯದತ್ತ ಸಾರಿಗೆ ಸಂಸ್ಥೆ ಚಿಂತನೆ ನಡೆಸಿದೆ.

Edited By :
Kshetra Samachara

Kshetra Samachara

09/12/2020 07:42 pm

Cinque Terre

84.48 K

Cinque Terre

7

ಸಂಬಂಧಿತ ಸುದ್ದಿ