ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹೋರಾಟದ ಹಾದಿ ಹಿಡಿದ ಪೌರ ಕಾರ್ಮಿಕರು

ಧಾರವಾಡ: ಅವರು ನಗರದ ಅಂದವನ್ನು ಹೆಚ್ಚಿಸುವ ಪೌರಕಾರ್ಮಿಕರು. ನಗರಗಳು ಸ್ವಚ್ಛಂದವಾಗಿರಬೇಕಂದ್ರೆ ಅವರು ಬೇಕೆ ಬೇಕು. ಆದರೆ, ಅಂಥವರ ಬದುಕು ಇದೀಗ ಬೀದಿಗೆ ಬಿದ್ದಿದೆ. ಸರ್ಕಾರದ ನೇರ ನೇಮಕಾತಿ ಯೊಜನೆಯ ಹೊಡೆತಕ್ಕೆ, ಕೈಯಲ್ಲಿರುವ ಕೆಲಸವನ್ನು ಕಳೆದುಕೊಂಡು ಕಂಗಾಲಾಗಿರೋ ಪೌರಕಾರ್ಮಿಕರು ಹೋರಾಟದ ಹಾದಿ ಹಿಡಿದಿದ್ದಾರೆ.

ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಇತ್ತೀಚಿಗೆ ರಾಜ್ಯ ಸರ್ಕಾರ ನೇರ ವೇತನ ಪಾವತಿ ಯೋಜನೆ ಆರಂಭಿಸಿದ್ದರಿಂದ, ನಗರದ ಸ್ವಚ್ಛತೆಗೆ ನೀಡಲಾಗುತ್ತಿದ್ದ ಗುತ್ತಿಗೆ ಪದ್ಧತಿ ಡಿಸೆಂಬರ್ 1 ರಿಂದ ನಿಲ್ಲಿಸಲಾಗಿದೆ. ಇದರಿಂದಾಗಿ ಇಂದು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದ ನೂರಾರು ಕಾರ್ಮಿಕರಿಗೆ ಕೆಲಸ ಮಾಡದಂತೆ ಗುತ್ತಿಗೆದಾರರು ಹೇಳಿ, ಮರಳಿ ಕಳಿಸಿದ್ದಾರೆ.

ಇದರಿಂದ ಆತಂಕಗೊಂಡಿರೋ ಕಾರ್ಮಿಕರು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮೊದಲಿನಿಂದಲೂ ಕೆಲಸ ಮಾಡಿಕೊಂಡು ಬಂದಿರುವ ನಮಗೆ ಅನ್ಯಾಯ ಮಾಡಲಾಗುತ್ತಿದೆ. ಇವರಿಗೆ ಬೇಕಾದಾಗ ಕೆಲಸ ಮಾಡಿಸಿಕೊಳ್ಳುತ್ತಾರೆ. ಬೇಡವಾದಾಗ ಕೆಲಸ ಬಿಟ್ಟು ಹೋಗಿ ಅಂತಾರೆ. ನಮ್ಮ ಈ ಸಮಸ್ಯೆಗೆ ಕೂಡಲೇ ಅಧಿಕಾರಿಗಳು ಪರಿಹಾರ ಒದಗಿಸಬೇಕು. ಇಲ್ಲವಾದರೆ ನಾವು ವಿಷ ಸೇವಿಸುತ್ತೇವೆ ಎಂದು ಪ್ರತಿಭಟನಾನಿರತರು ಅಳಲು ತೋಡಿಕೊಂಡರು.

Edited By : Manjunath H D
Kshetra Samachara

Kshetra Samachara

01/12/2020 06:58 pm

Cinque Terre

47.77 K

Cinque Terre

4

ಸಂಬಂಧಿತ ಸುದ್ದಿ