ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ನಿರಾಶ್ರಿತ ವೃದ್ಧನೋರ್ವನಿಗೆ ಸಹಾಯಹಸ್ತ ನೀಡಿದ ಆನಂದನಗರದ ನಿವಾಸಿ

ಹುಬ್ಬಳ್ಳಿ : ನಿತ್ಯ ಆನಂದನಗರದಲ್ಲಿನ ನಿವಾಸಿಗಳ ಮನೆಗೆ ಮನೆಗೆ ಬಂದು ಊಟ ಹಾಗೂ ಆಶ್ರಯಕ್ಕೆ ಬೇಡಿಕೆ ಇಡುತ್ತಿದ್ದ ವೃದ್ದನೊರ್ವನನ್ನು ಸ್ಥಳೀಯರು ಬುದ್ಧಿಮ್ಯಾಂದನೆಂದು ಹತ್ತಿರಕ್ಕೂ ಸೇರಿಸದೆ ಓಡಿಸುತ್ತಿದ್ದ ಪ್ರಸಂಗ ಹಾಗೂ ಚಿಕ್ಕ ಮಕ್ಕಳಿಂದ ವಿಪರೀತ ಬೈಗುಳಕ್ಕೆ ಇಡಾಡಗಿದ್ದ ವ್ಯಕ್ತಿಯ ಪರಿಸ್ಥಿತಿ ತಿಳಿದು.

ಆನಂದನಗರ ನಿವಾಸಿ ಆರೀಫ್ ಕುಂದಗೋಳ ಎಂಬ ಯುವಕ ಆತನ ಮಾತು ಹಾಗೂ ಸಮಸ್ಯೆಯನ್ನ ಆಲಿಸಿ ಈತ ಬುದ್ಧಿಮಾಂದ್ಯನಲ್ಲ, ಆಹಾರ ಬಟ್ಟೆ ಕೇಳಲು ಮನೆಗಳಿಗೆ ಬರುತ್ತಿದ್ದನೆಂದು ಸ್ಥಳೀಯರಿಗೆ ತಿಳಿಸಿ. ವೃದ್ಧನಿಗೆ ಬಟ್ಟೆ ಹಾಗೂ ಆಹಾರವನ್ನು ನೀಡಿ ಆತ ನಿತ್ಯ ವಾಸಿಸುತ್ತಿದ್ದ ಇಂಡಿಪಂಪ್ ದರಾಗಾಕೆ ಆಟೋದಲ್ಲಿ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

ಸದ್ಯ ಈ ಎಲ್ಲ ದೃಶ್ಯಗಳನ್ನು ಸೆರೆ ಹಿಡಿದ ಆರೀಫ್ ಜನರ ಬಳಿಗೆ ವ್ಯಕ್ತಿಯನ್ನು ಮೊದಲು ವಿಚಾರಿಸಿ, ಆತನಿಗೆ ಸಹಾಯ ತೋರಿ ಎಂದು ಪಬ್ಲಿಕ್ ನೆಕ್ಸ್ಟ್ ಗೆ ವಿಡಿಯೋ ಕಳುಹಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

25/11/2020 05:03 pm

Cinque Terre

50.46 K

Cinque Terre

7

ಸಂಬಂಧಿತ ಸುದ್ದಿ