ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೈಕಲ್ ಸಾಹಿತಿ ಡಾ. ವಿ ಸಿ ಐರಸಂಗ ಇನ್ನಿಲ್ಲ.

ಧಾರವಾಡ- ನಗರದ ಸಾಹಿತ್ಯಾಸಕ್ತರ ವಲಯದಲ್ಲಿ ಸೈಕಲ್ ಸಾಹಿತಿ ಎಂದೇ ಹೆಸರಾಗಿದ್ದ ಹಿರಿಯ ಕವಿ ಡಾ. ವಿ ಸಿ ಐರಸಂಗ ಇನ್ನಿಲ್ಲ. ಇಂದು ನಸುಕಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.

ರೈಲ್ವೇ ಉದ್ಯೋಗಿಯಾಗಿದ್ದ ಅವರು 35ಕ್ಕೂ ಹೆಚ್ಚು ಕಾವ್ಯ ಸಂಕಲನಗಳನ್ನು ಪ್ರಕಟಿಸಿದ್ದಾರೆ. 2 ಸಂಪುಟಗಳಲ್ಲಿ ಸಮಗ್ರ ಸಾಹಿತ್ಯ ಪ್ರಕಟಿಸಿದ್ದಾರೆ.

ಸಾಹಿತ್ಯ ಮಾತ್ರವಲ್ಲ, ಶಾಸ್ತ್ರೀಯ ಸಂಗೀತದಲ್ಲೂ ವಿಶೇಷ ಆಸಕ್ತಿ ಹೊಂದಿದ್ದ ಡಾ. ಐರಸಂಗರು ಸ್ವತಃ ತಬಲಾ ವಾದಕರಾಗಿದ್ದರು.

ಇವರು ಬರೆದ ಸುಮಾರು ಕವಿತೆಗಳು ವಿವಿಧ ಸುಗಮ ಸಂಗೀತಗಾರರ ಧ್ವನಿಯಲ್ಲಿ ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಪ್ರಸಾರವಾಗಿವೆ.

ತಮ್ಮ ವೃದ್ಧಾಪ್ಯದಲ್ಲೂ ಈಜು ಹಾಗೂ ಮಲ್ಲಗಂಬ ಕ್ರೀಡೆಯಲ್ಲಿ ಸಕ್ರಿಯರಾಗಿದ್ದರು.

ಇವರ ಸಾಹಿತ್ಯ ಸೇವೆ ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಇತ್ತೀಚೆಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಎಲ್ಲಿಯೇ ಹೋದರೂ ಸೈಕಲ್ ಸವಾರಿ ಮಾಡಿಕೊಂಡೇ ಹೋಗುತ್ತಿದ್ದ ಐರಸಂಗರು ವಿನಮ್ರ ಸರಳತೆ ಹೊಂದದ್ದರು.

ಅವರ ಅಗಲುವಿಕೆಯ ಮೂಲಕ ಧಾರವಾಡದ ಸಾರಸ್ವತ ಲೋಕದ ಸಾತ್ವಿಕ ಕೊಂಡಿ ಕಳಚಿದಂತಾಗಿದೆ.

ಮೃತರಿಗೆ ಓರ್ವ ಪುತ್ರ, ಹಾಗೂ ಮೂವರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಬೆಳಿಗ್ಗೆ ಧಾರವಾಡ ಹೊಸಯೆಲ್ಲಾಪುರದ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಪುತ್ರಿ ಪುಷ್ಪಾ ಐರಸಂಗ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

13/11/2020 07:30 am

Cinque Terre

46.41 K

Cinque Terre

20

ಸಂಬಂಧಿತ ಸುದ್ದಿ