ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಕ್ತದಾನ ಮಾಡಿ ಗೆಳೆಯನ ಜನ್ಮದಿನ ಆಚರಣೆ ಮಾಡಿದ ಹುಬ್ಬಳ್ಳಿ ಹೈದರು

ಹುಬ್ಬಳ್ಳಿ: ಗೆಳೆಯನ ಜನ್ಮದಿನ ಅಂದ್ರೇ ಗಿಪ್ಟ್,ಪಾರ್ಟಿ ಕೊಡುವಂತ ದಿನಮಾನದಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯ ಯುವಕರ ತಂಡವೊಂದು ತಮ್ಮ ಗೆಳೆಯನ ಜನ್ಮದಿನದ ಅಂಗವಾಗಿ ತಮ್ಮ ರಕ್ತದಾನ ಮಾಡುವ‌ ಮೂಲಕ ಗೆಳೆಯನ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ.

ಹುಬ್ಬಳ್ಳಿ ಸಮಾಜ ಸೇವಕ ಅಕ್ಬರ ಮುಲ್ಲಾ ಗೆಳೆಯರ ಬಳಗದಿಂದ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಪ್ರತಿಷ್ಟಿತ ರಾಷ್ಟ್ರೋತ್ಥಾನ ರಕ್ತದಾನ ಭಂಡಾರ ಕೇಂದ್ರದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಗೆಳೆಯರು ರಕ್ತದಾನ ಮಾಡಿದ್ದು,ವಿಶೇಷವಾಗಿದೆ.

ಇನ್ನೂ ಹೊಸುರು ನಿವಾಸಿಯಾಗಿರುವ ಅಕ್ಬರ್ ಮುಲ್ಲಾ ಅವರ ಜನ್ಮದಿನವನ್ನು ರೋಗಿಗಳ ಆರೈಕೆಗೆ ಹಾಗೂ ತುರ್ತು ರಕ್ತದ ಪರಿಸ್ಥಿತಿ ನಿಭಾಯಿಸಲು ಕೈಗೊಂಡಿರುವ ನಿರ್ಧಾರ ಶ್ಲಾಘನೀಯವಾಗಿದೆ.ಹೀಗೆ ಯುವಕರು ಈ ರೀತಿ ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯದಲ್ಲಿ ತೊಡಗಬೇಕು ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯವಾಗಿದೆ.

Edited By : Manjunath H D
Kshetra Samachara

Kshetra Samachara

11/11/2020 07:22 pm

Cinque Terre

32.07 K

Cinque Terre

3

ಸಂಬಂಧಿತ ಸುದ್ದಿ