ನವಲಗುಂದ : ದೀಪಾವಳಿ ಅಂದ್ರೆ ಅದು ಬೆಳಕಿನ ಹಬ್ಬಾ ಅಂತಾನೆ ಅನ್ನಬಹುದು, ಈ ಹಬ್ಬದಲ್ಲಿ ದೀಪಗಳ ಜೊತೆ ಜೊತೆಯಲಿ ರಾರಾಜಿಸೋದು ಪಟಾಕಿಗಳು, ಆದ್ರೆ ಈಗಾ ಈ ಬೆಳಕಿನ ಹಬ್ಬಕ್ಕೂ ಕೊರೋನಾ ಮಹಾ ಮಾರಿಯ ಕರಿ ಛಾಯೆ ಎರಗಿದ್ದು, ಪಟಾಕಿ ಮಾರಾಟಗಾರರ ಸಂಕಷ್ಟಕ್ಕೂ ಕಾರಣವಾಗಿದೆ...
ನವಲಗುಂದ ಪಟಾಕಿ ಅಂದ್ರೆ ಧಾರವಾಡ ಜಿಲ್ಲೆಯಲ್ಲೇ ಪ್ರಸಿದ್ದಿ ಪಡೆದಿದೆ. ಇಲ್ಲಿನ ಪಟಾಕಿಯನ್ನು ಧಾರವಾಡ, ಹುಬ್ಬಳ್ಳಿ ಸೇರಿದಂತೆ ಹಲವೆಡೆಯಿಂದ ಕೊಳ್ಳಲು ಜನ ಆಗಮಿಸುತ್ತಾರೆ.
ಅಂತದ್ರಲ್ಲಿ ಈಗ ರಾಜ್ಯ ಸರ್ಕಾರ ಪಟಾಕಿ ಮಾರಾಟಗಾರರಿಗೆ ಗಾಯದ ಮೇಲೆ ಬರೆ ಎಳೆದಿದೆ. ಈ ಬಾರಿ ರಾಜ್ಯ ಸರ್ಕಾರ ಹಸಿರು ಪಟಾಕಿ ಹೊರತು ಪಡಿಸಿ ಉಳಿದ ಎಲ್ಲಾ ರೀತಿಯ ಪಟಾಕಿಗಳಿಗೆ ನಿಷೇಧ ಹೇರಿದ್ದು, ಇದನ್ನೇ ನಂಬಿಕೊಂಡು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ ಅದೆಷ್ಟೋ ಪಟಾಕಿ ವ್ಯಾಪಾರಸ್ಥ ಕುಟುಂಬಗಳು ಈಗಾ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಈ ಬಗ್ಗೆ ಪಟಾಕಿ ವ್ಯಾಪಾರಸ್ಥರಾದ ನಾರಾಯಣ ಪವಾರ ಪಬ್ಲಿಕ್ ನೆಕ್ಸ್ಟ್ ಎದುರು ಈ ರೀತಿ ತಮ್ಮ ಅಳಲನ್ನು ತೋಡಿಕೊಂಡರು...
ಹಿಂದೂಗಳು ತುಂಬಾ ವಿಜೃಂಭಣೆಯಿಂದ ಆಚರಿಸೋ ಹಬ್ಬ ಗಣೇಶ ಚತುರ್ಥಿ ಮತ್ತು ದೀಪಾವಳಿ, ಈಗ ಎರಡು ವರ್ಷದಿಂದ ಹಸಿರು ಪಟಾಕಿ ಮಾರುಕಟ್ಟೆಗೆ ಬರುತ್ತಿದೆ, ಇದರಿಂದ ವಾಯು ಮಾಲಿನ್ಯ ಆಗೋದಿಲ್ಲಾ, ಈಗಾಗಲೇ ಸರ್ಕಾರ ಹಸಿರು ಪಟಾಕಿಗೆ ಹಸಿರು ನಿಶಾನೆ ಕೊಟ್ಟಿರೋದು ಸ್ವಾಗತಾರ್ಹ, ಸರ್ಕಾರದ ಮಾರ್ಗ ಸೂಚಿಯಂತೆ ನಾವು ಮಾರಾಟ ಮಾಡ್ತೀವಿ ಅಂತಾರೆ ಇನ್ನೊರ್ವ ಪಟಾಕಿ ವ್ಯಾಪಾರಸ್ಥರಾದ ಲೋಕನಾತ್ ಹೆಬಸೂರು...
ಇನ್ನೂ ಸರ್ಕಾರ ಈಗಾಗಲೇ ಪಟಾಕಿಗೆ ನಿಷೇಧ ಹೇರಿದರು ಕೂಡ ಹಸಿರು ಪಟಾಕಿಗೆ ಗ್ರೀನ್ ಸಿಗ್ನೆಲ್ ನೀಡಿರೋದು ಪಟಾಕಿ ವ್ಯಾಪಾರಸ್ಥರಿಗೆ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದ್ದರೂ ಸಹ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವ ಸ್ಥಿತಿ ವ್ಯಾಪಾರಿಗಳಿಗೆ ಬಂದೊದಗಿದೆ...
Kshetra Samachara
10/11/2020 02:03 pm