ಹುಬ್ಬಳ್ಳಿ: ಒಣ ಬೇಸಾಯದ ನೆಲದಲ್ಲಿ ಸೊರಗಿದ ಬೇಸಾಯಕ್ಕೆ ಪುನಶ್ಚೇತನವಾದ ಜಲ, ಕೃಷಿಯಲ್ಲಿ ಲಾಭವೇ ಇಲ್ಲಾ ಎನ್ನುತ್ತಿದ್ದವರ ಪಾಲಿಗೆ ಹೆಚ್ಚಿದ ಆದಾಯ, ಕಪ್ಪು ಭೂಮಿಯಲ್ಲಿ ಸವಾಲಾದ ಮೀನುಗಾರಿಕೆಗೆ ಪ್ರೋತ್ಸಾಹ ತುಂಬಿದ ಜಲಧಾರೆ.
ಇಷ್ಟೆಲ್ಲಾ ಸಾಧನೆ ಸಾಕಾರಕ್ಕೆ ದಾರಿಯಾದದ್ದು ಮಾತ್ರ ಅದೊಂದೇ ಮಾರ್ಗ ಅದುವೇ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ. ಒಣಬೇಸಾಯ ಶೈಲಿಯನ್ನೇ ಅನುಸರಿಸಿದ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ರೈತ ಗುರುಪಾದಪ್ಪ ಹಣುಮಂತಪ್ಪ ನೆಲಗುಡ್ಡ ತಮ್ಮ ಜಮೀನಿನಲ್ಲಿ ಪ್ರಯೋಗ ಎಂಬಂತೆ ನಿರ್ಮಿಸಿದ ಕೃಷಿಹೊಂಡ ಇದೀಗ ಆದಾಯದ ಹೊನಲನ್ನೇ ಹರಿಸಿದೆ.
ತಮ್ಮ 16 ಎಕರೆ ಜಮೀನಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಕಾರ ಪಡೆದು 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡ ರೈತ ಗುರುಪಾದಪ್ಪ ಏನೆಲ್ಲಾ ಬದಲಾವಣೆ ಕಂಡಿದ್ದಾರೆ ? ಒಣಬೇಸಾಯದ ನೆಲದಲ್ಲಿ ಕೃಷಿಹೊಂಡ ಪೂರಕವಾದದ್ದು ಹೇಗೆ ? ದೇಶಪಾಂಡೆ ಫೌಂಡೇಶನ್ ಸಹಕಾರ ಹೇಗಿದೆ ? ಕೃಷಿಹೊಂಡ ಯಾವ ರೀತಿಯಲ್ಲಿ ಬಹುಪಯೋಗಿ ಎಂಬೆಲ್ಲಾ ಸಾಲು ಸಾಲು ಪ್ರಶ್ನೆಗಳಿಗೆ ರೈತಾಪಿ ಬದುಕಿನ ಸಂತೋಷದ ಉತ್ತರ, ದುಡಿಮೆಯ ಹುಮ್ಮಸ್ಸಿನ ಮಾತುಗಳ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ನಡೆಸಿದ ಚಿಟ್ ಚಾಟ್ ಇಲ್ಲಿದೆ ನೋಡಿ...
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/09/2022 08:07 pm