ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: 22 ಎಕರೆ ಜಮೀನಿನಲ್ಲಿ ವಾರ್ಷಿಕ 15 ಲಕ್ಷ ಆದಾಯ

ಅಣ್ಣಿಗೇರಿ: ದೇಶಪಾಂಡೆ ಫೌಂಡೇಶನ್ ಸಹಕಾರದ ಕೃಷಿಹೊಂಡ ಆಶ್ರಿತ ಬೇಸಾಯದ ಮೂಲಕ ಇಲ್ಲೋಬ್ಬ ರೈತ ತನ್ನ 22 ಎಕರೆ ಜಮೀನಿನಲ್ಲಿ ವಾರ್ಷಿಕ 15 ಲಕ್ಷ ಆದಾಯ ಗಳಿಸಿದ್ದಾರೆ ಎಂದ್ರೇ ನೀವೂ ನಂಬ್ತೀರಾ ? ನಂಬಲೇಬೇಕು ಅಂತಹ ಬದಲಾವಣೆಗೆ ಕೃಷಿಹೊಂಡ ನಿರ್ಮಾಣ ಕಾಮಗಾರಿ ಸಾಕ್ಷಿಯಾಗಿ ರೈತನ ಬಾಳಲ್ಲಿ ಬೆಳದಿಂಗಳನ್ನು ಚೆಲ್ಲಿದೆ.

ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ರೈತ ಬಸವರಾಜ ಇಸ್ರಣ್ಣನವರ ತಮ್ಮ 22 ಎಕರೆ ಜಮೀನಿಗೆ ಹೊಂದಿಕೊಂಡಂತೆ 200/200 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಮುಂಗಾರು ಹೆಸರು, ಮೆಣಸಿನಕಾಯಿ, ಈರುಳ್ಳಿ ಬೆಳೆ ಜೊತೆ ಹಿಂಗಾರು ಕಡಲೆ, ಕುಸುಬೆ, ಗೋಧಿ ಜೊತೆ ಜೊತೆಗೆ ಕೃಷಿಹೊಂಡ ಆಶ್ರಿತವಾಗಿ ನೀರಾವರಿ ಶೇಂಗಾ, ನೀರಾವರಿ ಸಂದಕಾ ಗೋಧಿ ಬೆಳೆದು ಉತ್ತಮ ಆದಾಯದ ನಿರೀಕ್ಷೆ ಎಡೆಗೆ ಗುರಿ ಇಟ್ಟಿದ್ದಾರೆ.

ಇನ್ನು ಕೃಷಿಹೊಂಡ ನಿರ್ಮಾಣ ಕಾಮಗಾರಿ ಕೇವಲ ಬೆಳೆಗಳಿಗೆ ಅಷ್ಟೇ ಉಪಯುಕ್ತವಾಗಿರದೇ ಬದು ನಿರ್ಮಾಣ, ಮಣ್ಣಿನ ಸವಕಳಿ, ಹೊಲ ಸಮತಟ್ಟಾಗಿ ಮಾಡಲು ಸಹ ಸಾಕಾರವಾಗಿ ರೈತ ಬಸವರಾಜ ಇಸ್ರಣ್ಣನವರಿಗೆ ವಾರ್ಷಿಕ 15 ಲಕ್ಷ ಆದಾಯ ನೀಡಿದೆ.

Edited By : Nagaraj Tulugeri
Kshetra Samachara

Kshetra Samachara

28/02/2022 08:59 am

Cinque Terre

69.19 K

Cinque Terre

0

ಸಂಬಂಧಿತ ಸುದ್ದಿ