ನವಲಗುಂದ: ಇರುಳು ಸರಿಯತ್ತಲೇ ಹೊಲದ ಹಾದಿ ಹಿಡಿಯುವ ನಮ್ಮ ಅನ್ನದಾತರು ನಿಜವಾದ ಕಾಯಕ ಜೀವಿಗಳು. ಅವರ ಅವಿರತ ಶ್ರಮಕ್ಕೆ ಸರಿಸಮನಾದ ಉದ್ಯೋಗ ಇನ್ನೊಂದಿಲ್ಲ. ಪ್ರಕೃತಿಯ ಹಲವಾರು ವೈಪರೀತ್ಯಗಳನ್ನು ಅರ್ಥೈಸಿಕೊಂಡು ತಮ್ಮ ಪಾಡಿಗೆ ತಾವು ದುಡಿಯುತ್ತಾರೆ ನಮ್ಮ ಕೃಷಿಕರು.
ಇದೇ ರೀತಿ ಕೃಷಿ ಕಾಯಕ ಮಾಡುತ್ತಿರುವ ಅನ್ನದಾತ ಚೆನ್ನಪ್ಪ ಹಾಲವರ ಅವರ ಬಗ್ಗೆ ತಿಳಿಯೋಣ. ನವಲಗುಂದ ತಾಲೂಕು ಇಬ್ರಾಹಿಂಪುರ ಗ್ರಾಮದ ಇವರು ಮೂರುವರೆ ಎಕರೆ ಹೊಲದಲ್ಲಿ ದುಡಿಯುತ್ತ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಇವರ ಈ ಕಾರ್ಯಕ್ಕೆ ದೇಶಪಾಂಡೆ ಫೌಂಡೇಶನ್ ಯಾವ ರೀತಿ ಬೆಂಬಲವಾಗಿ ನಿಂತಿದೆ ಅನ್ನೋದನ್ನ ಅವರೇ ಹೇಳ್ತಾರೆ ಕೇಳಿ.
Kshetra Samachara
25/12/2021 10:17 am