ನವಲಗುಂದ : ನಾವೆಲ್ಲಾ ತುತ್ತಿನ ಕೈ ಚೀಲ ಹಿಡಿದು ಬಸ್ ಹತ್ತಿ ಹುಬ್ಬಳ್ಳಿಗೆ ಏನು ಸಿಗತ್ತೋ ಆ ದುಡಿಮೆ ಮಾಡಾಕ್ ಹೋಗತಿದ್ವಿ, ಕೆಲವೊಮ್ಮೇ ದುಡಿಮೆ ಇಲ್ಲದೆ ಕಟ್ಟಿಕೊಂಡ ಹೋದ ಬುತ್ತಿ ಉಂಡು ಕೈಯಿಂದ ಬಸ್ ಚಾರ್ಜ್ ಹಾಕಿಕೊಂಡು ಮನೆ ತಲುಪಿದ್ದೇವೆ,ಅಬ್ಬಾ! ಈಗ ಆ ಕಷ್ಟ ಇಲ್ಲಾ ನಮ್ಮದೆ ಜಮೀನನಲ್ಲಿ ನೆಮ್ಮದಿ ದುಡಿಮೆ ಸಿಕ್ಕಿದೆ ಫಲ ಬಂದಿದೆ ಆದಾಯ ಹೆಚ್ಚಿದೆ.
ಈ ಮೇಲಿನ ಮಾತುಗಳನ್ನೇಲ್ಲಾ ಹೇಳಿದ್ದು ನವಲಗುಂದ ತಾಲೂಕಿನ ಸೊಟಕನಹಾಳ ಗ್ರಾಮದ ರೈತ ದಾವಲಸಾಬ್ ನಾಯ್ಕರ್. ತಮ್ಮ 16 ಎಕರೆ ಜಮೀನಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡ ಇವರು ತಮ್ಮ ಕಷ್ಟಕ್ಕೆಲ್ಲಾ ಗುಡ್ ಬೈ ಹೇಳಿ, ಇಂದು ಇಲ್ನೋಡಿ ಈ ರೀತಿ ಪ್ರಕೃತಿ ಮಡಿಲಲ್ಲಿ ಬೇಸಾಯದ ಖುಷಿಯಲ್ಲಿ ಸಂತೋಷವಾಗಿದ್ದಾರೆ.
ಒಣ ಬೇಸಾಯ ಕೃಷಿಯಲ್ಲಿ ನಷ್ಟ ಕಂಡ ಇವರು ತಮ್ಮ ಜಮೀನಿನಲ್ಲಿ 160/160 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡ ಈ ಬಾರಿ ಬಂಪರ್ ಬೆಳೆ ಬೆಳೆದಿದ್ದು ಲಕ್ಷ ಲಕ್ಷ ಆದಾಯ ಗಳಿಕೆಯ ಹೊಸ್ತಿಲಲ್ಲಿದ್ದಾರೆ.
ಸಧ್ಯ ರೈತ ದಾವಲಸಾಬ್ ಹೆಸರು ಬೆಳೆ ಲಾಭ ಪಡೆದು ಗೋವಿನಜೋಳ, ಈರುಳ್ಳಿ, ಸೂರ್ಯಕಾಂತಿ, ಮೆಣಸಿನಕಾಯಿ ಬೆಳೆಯ ಫಲದ ನಿರೀಕ್ಷೆಯಲ್ಲಿ ನಿತ್ಯ ಕೃಷಿ ಕಾಯಕ ಮಾಡುತ್ತಾ ಸುಖದ ಮಾರ್ಗದಲ್ಲಿದ್ದಾರೆ.
ಇನ್ನೂ ವಿಶೇಷ ಎಂದ್ರೇ, ಒಣಬೇಸಾಯ ಮಾಡುತ್ತಾ ಎಕರೆ ಜಮೀನನಲ್ಲಿ 10 ಸಾವಿರ ಆದಾಯ ಗಳಿಸುತ್ತಿದ್ದ ರೈತ ದಾವಲಸಾಬ್ ಪ್ರಸ್ತುತ ಕೃಷಿಹೊಂಡ ಆಶ್ರಿತ ಬೇಸಾಯದ ಮೂಲಕ ಎಕರೆಗೆ 30.000 ನಿವ್ವಳ ಆದಾಯ ಗಳಿಸಿಕೊಂಡು ದೇಶಪಾಂಡೆ ಫೌಂಡೇಶನ್ ಇನ್ನಷ್ಟು ಸೌಲಭ್ಯ ರೈತರಿಗೆ ನೀಡಲಿ ಅವರಿಗೂ ಒಳಿತಾಗಲಿ ಎಂದು ಹೃದಯ ತುಂಬಿ ಹಾರೈಸಿದ್ದಾರೆ.
Kshetra Samachara
22/10/2021 05:26 pm