ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಕುಟುಂಬದ ನೊಗ ಹೊತ್ತ ಸರಸ್ವತಿ: ನೇಗಿಲು ಹಿಡಿದು ಉಳುಮೆ ಮಾಡುವ ಅನ್ನದಾತೆ.‌.!

ಗದಗ: ಹೆಣ್ಣೊಂದು ಕಲಿತರೇ ಶಾಲೆಯೊಂದು ತೆರೆದಂತೆ ಎಂಬುವಂತ ಮಾತಿದೆ‌. ಆದರೆ ಆ ಹೆಣ್ಣು ಈಗ ಕುಟುಂಬದ ಬಾರವನ್ನು ಹೊತ್ತು ಮುನ್ನಡೆಯುತ್ತಿದ್ದಾಳೆ‌. ನೇಗಿಲು ಹಿಡಿದು ಕುಟುಂಬ ನಿರ್ವಹಣೆ ಜೊತೆಗೆ ದೇಶಕ್ಕೆ ಅನ್ನಹಾಕುವ ಅನ್ನದಾತೆ ಆಗಿದ್ದಾಳೆ.

ಹೌದು‌... ಹೀಗೆ ಬಾರುಕೋಲ ಹಿಡಿದು ಎಡೆ ಹೊಡೆತಾಯಿರೋ ಈ ಯುವತಿ ಹೆಸರು ಸರಸ್ವತಿ ಲಮಾಣಿ ಅಂತ. ಇವಳು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ತಾಂಡಾದಲ್ಲಿ ನೆಲೆಸಿರುವ ಬಡಕುಟುಂಬದವಳು. ಸಾಮಾನ್ಯವಾಗಿ ಎಲ್ಲವೂ ಸರಿ ಇದ್ದವರೇ ಇಂದು ಕೃಷಿ ಜೀವನಕ್ಕೆ ಹೊಂದಿಕೊಳ್ಳೋಕೆ ಆಗ್ತಿಲ್ಲ‌. ಯುವಕರಂತೂ ಕೃಷಿ ಅಂದರೆ ಮೂಗು ಮೂರಿಯೋ ಕಾಲ ಬಂದಿದೆ. ಆದರೆ ಸರಸ್ವತಿ ಮಾತ್ರ ತಾನು ಹೆಣ್ಣಾಗಿದ್ದರೂ ಸಹ, ಒಬ್ಬ ಅನುಭವಸ್ಥ ರೈತ ಏನೆಲ್ಲ ಕೃಷಿ ಚಟುವಟಕೆ ಮಾಡ್ತಾನೋ ಅವೆಲ್ಲವುಗಳನ್ನೂ ಬಹಳ ಸಲೀಸಾಗಿ ಮಾಡಿ ಮುಗಿಸೋ ಪರಿಣತಿ ಪಡೆದಿದ್ದಾಳೆ. ಇನ್ನೂ ವಿಶೇಷ ಅಂದರೆ ಈ ಅನ್ನದಾತೆ ಸರಸ್ವತಿಗೆ ಆ ದೇವರು ಮಾತ್ರ ಅನ್ಯಾಯ‌ ಮಾಡಿದ್ದಾನೆ. ಏನಪ್ಪ ಅಂದರೆ ಈಕೆಗೆ ಮಾತನಾಡಲು ಮಾತು ಬರುವುದಿಲ್ಲ.‌ ಏನಾದರೂ ಕೇಳಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಸಹೃದಯಿ ಸರಸ್ವತಿಗೆ ಕಿವುಡುತನವನ್ನು ಕೊಟ್ಟಿದ್ದಾನೆ.

ತಂದೆ ಅಪಘಾತವಾಗಿ ನೆಲ ಹಿಡಿದ ಪರಿಣಾಮ ಹಾಗೂ ತನ್ನ ಸಹೋದರರು ಯಾರೂ, ಮನೆ ಜವಾಬ್ದಾರಿ ತೆಗೆದುಕೊಳ್ಳದ ಕಾರಣ, ಸರಸ್ವತಿ ಮನೆಗೆ ಹಿರಿಯ ಮಗನಾಗಿ ಇಡೀ ಕುಟುಂಬದ ಜವಾಬ್ದಾರಿ ಹೊತ್ತಿದ್ದಾಳೆ. ಇನ್ನೂ ಕೃಷಿಯನ್ನು ಸಂಪೂರ್ಣ ಅರಿತಿರುವ ಈಕೆಗೆ ಜಮೀನಿನಲ್ಲಿನ ಎಂಥಹದೇ ಕೆಲಸ ಬಹಳ ಸರಳ. 6 ನೇ ತರಗತಿವರೆಗೂ ಮಾತ್ರ ಶಾಲೆಗೆ ಹೋಗಿರುವ ಸರಸ್ವತಿ, ಸುಮಾರು ವರ್ಷದಿಂದ ಈ ಕಾಯಕದಲ್ಲಿ ತೊಡಗಿದ್ದಾಳೆ. ತಂದೆ ಮಾರುತಿ ಲಮಾಣಿ, ಬೈಕ್ ಅಪಘಾತದಲ್ಲಿ ಬಿದ್ದು ನರಗಳ ಶಕ್ತಿ ಕಳೆದುಕೊಂಡಿದ್ದರಿಂದ, ಇಡೀ ಕುಟುಂಬದ ನೊಗ ಸರಸ್ವತಿ ಹೆಗಲಿಗೆ ಬಿದ್ದಿದೆ..

ಇಬ್ಬರು ಗಂಡು ಮಕ್ಕಳಿದ್ದರೂ ತಂದೆ ಮಾರುತಿಗೆ ಪ್ರಯೋಜನವಿಲ್ಲದಂತಾಗಿದೆ. ಇಬ್ಬರು ಹೆಣ್ಣುಮಕ್ಕಳಲ್ಲಿ ಓರ್ವ ಮಗಳನ್ನು ಮದುವೆ ಮಾಡಿಕೊಡಲಾಗಿದೆ. ಆದರೆ ಕೊನೆ ಮಗಳು ಸರಸ್ವತಿ ಮಾತ್ರ ಹಾಸಿಗೆ ಹಿಡಿದಿದ್ದ ತಂದೆ ಆರೈಕೆ ಮಾಡ್ತಾನೆ ವ್ಯವಸಾಯ ಕಲಿತಿದ್ದಾಳೆ. ಸರಸ್ವತಿ ಜಮೀನಿಗೆ ಇಳಿದರೆ ಸಾಕು ಎಂಥಹ ರೈತನೇ ಆಗಲಿ ಬೆರಗಾಗುವಂತೆ ಒಕ್ಕಲುತನ ಮಾಡ್ತಾಳೆ. ಇನ್ನೂ ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳಿಸೋಣ ಅಂದರೆ ಸರಸ್ವತಿ ಬಿಲ್ ಕುಲ್ ಒಪ್ಪೋದಿಲ್ವಂತೆ. ನಾನು ಮದುವೆಯಾಗಿ ಹೋದರೆ ನಿಮ್ಮನ್ನು ನೋಡುವವರು‌ ಯಾರು ಅಂತ, ಮದುವೆ ವಿಚಾರ ಪ್ರಸ್ತಾಪಿಸಿದರೇ ಮನೆ ಬಿಟ್ಟು ಹೋಗ್ತಿನಿ ಎಂದು ಎಚ್ಚರಿಕೆ ನೀಡಿದಾಳೆ. ಸದ್ಯ ಆದರಳ್ಳಿ ತಾಂಡಾದಲ್ಲಿ ಮೂರು ಎಕರೆ ಜಮೀನು ಹೊಂದಿರುವ ಇವರ ಕುಟುಂಬ ಸರಸ್ವತಿಯಂಥ ಮಗಳನ್ನು ಪಡೆಯಲು ನಮ್ಮ ಪೂರ್ವ ಜನ್ಮದ ಪುಣ್ಯ ಅಂತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

30/07/2021 10:11 pm

Cinque Terre

61.13 K

Cinque Terre

16

ಸಂಬಂಧಿತ ಸುದ್ದಿ