ಕುಂದಗೋಳ : ಕೃಷಿ ಕ್ಷೇತ್ರ ರೈತಾಪಿ ಚಟುವಟಿಕೆಯಲ್ಲಿ ಏನಿದೆ ಸ್ವಾಮಿ ? ಎಲ್ಲವೂ ಲಾಸ್ ಎಂದು ತುತ್ತಿನ ಕೈ ಚೀಲ ಹಿಡಿದುಕೊಂಡು ನಗರಗಳತ್ತ ದುಡಿಮೆ ಅರಸಿ ಓಡುವವರೇ ಹೆಚ್ಚು.
ಇಂತಹ ಕಾಲಘಟ್ಟದಲ್ಲಿ ಇಲ್ಲೋಬ್ಬ ರೈತ ಕೃಷಿಯಲ್ಲಿ ಎಲ್ಲವೂ ಇದೆ ಎಂದು ತನ್ನ ಕೃಷಿ ಕ್ಷೇತ್ರದ ಲಾಭದ ಸಾಧನೆ ಮೂಲಕ ಜನರಿಗೆ ಉತ್ತರ ನೀಡಿದ್ದಾನೆ.
ಇವರ ಹೆಸರು ಬಸವರಾಜ ಪುರದಪ್ಪ ಬೆಂತೂರು ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದವರು ಎಲ್ಲರಂತೆ ಅತಿವೃಷ್ಟಿ ಅನಾವೃಷ್ಟಿ ಹೊಡೆತಕ್ಕೆ ಬಳಲಿ ಕೃಷಿ ಹೊಂಡದ ಮೂಲಕ ಲಕ್ಷ ಲಕ್ಷ ಆದಾಯಗಳಿಸಿ ನಾನು ರೈತಾಪಿ ಕಾಯಕದಲ್ಲೇ ಸುಖವಾಗಿದ್ದೇನೆ ಎಂದು ನಿರೂಪಿಸಿದವರು.
ಕೃಷಿಯಲ್ಲಿ ಸತತವಾಗಿ ಅತಿವೃಷ್ಟಿ ತಪ್ಪಿದರೇ ಅನಾವೃಷ್ಟಿಗೆ ಸಿಲುಕಿ ಕಷ್ಟದಲ್ಲಿದ್ದಾಗ ಹೊಳೆದ ಕೃಷಿಹೊಂಡ ನಿರ್ಮಾಣದ ಆಲೋಚನೆಗೆ ತೋಟಗಾರಿಕೆ ಇಲಾಖೆ ಸಹಾಯಧನದ ಅಡಿಯಲ್ಲಿ 2019-20 ನೇ ಸಾಲಿನಲ್ಲಿ ತಮ್ಮ ಜಮೀನಿನಲ್ಲಿ 150×150 ಅಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಕೊತಂಬರಿ, ಮೆತ್ತೆ, ಪಾಲಕ, ಬದನೆಕಾಯಿ, ಟೊಮ್ಯಾಟೊ, ಕ್ಯಾಬೀಜ್, ಹೆಸರು, ಅಲಸಂಧಿ, ಈರುಳ್ಳಿ, ಮೆಣಸಿನಕಾಯಿ ಬೆಳೆ ಬೆಳೆದು ಮೊದಲನೇ ಫಸಲು ಪೂರ್ಣ ಮಾರಾಟ ಮಾಡಿ ಒಂದು ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದ್ದಾರೆ.
ಮೂರು ಎಕರೆ ಪ್ರದೇಶದಲ್ಲಿ ಕೃಷಿ ಹೊಂಡದ ಆಶ್ರಯದಲ್ಲಿ ವಿಧ ವಿಧದ ತರಕಾರಿ ಜೊತೆ ಧಾನ್ಯದ ಬೆಳೆಗಳನ್ನು ಬೆಳೆದ ಇವರು ಮೀನು ಸಾಕಾಣಿಕೆ ಸಹ ಆರಂಭಿಸಿದ್ದಾರೆ.
ಈಗಾಗಲೇ ಕೃಷಿ ಹೊಂಡದಲ್ಲಿ ವಿವಿಧ ಜಾತಿಯ 6000 ಮೀನುಗಳನ್ನು ಸಾಕುತ್ತಿದ್ದು ಅವುಗಳ ಫಲದ ನಿರೀಕ್ಷೆಯಲ್ಲಿದ್ದಾರೆ.
3 ಏಕರೆ ಕೃಷಿ ಪ್ರದೇಶಕ್ಕೆ ಕೃಷಿ ಹೊಂಡದ ನಿರ್ಮಿಸಿದ ಇವರು ಮುಂದಿನ ದಿನಗಳಲ್ಲಿ ಅದನ್ನು ದ್ವಿಗುಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದು, ಕೃಷಿಹೊಂಡ ನಿರ್ಮಾಣ ಹಾಗೂ ತರಕಾರಿ ಬೆಳೆ ಬಗ್ಗೆ ಮಾಹಿತಿ ಇತರೆ ಸಹಾಯ ಬೇಕಾದಲ್ಲಿ ನನ್ನನ್ನು ಸಂಪರ್ಕಿಸಿ ರೈತರು ಕೃಷಿಯಲ್ಲೇ ಏನಾದರೂ ಸಾಧಿಸಿ ಎಂದು ಪ್ರೇರೆಪಿಸುತ್ತಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
06/02/2021 05:15 pm