ಧಾರವಾಡ : ವಾಲ್ಮೀಕಿ ಜಯಂತಿ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ರಾಜ್ಯದ ವಾಲ್ಮೀಕಿ ಸಮಾಜದ ಐವರಿಗೆ ವಾಲ್ಮೀಕಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಧಾರವಾಡ ನಿವಾಸಿಯಾದ ಬೆಳಗಾವಿ ವಿಭಾಗ ಮಟ್ಟದಿಂದ ಪ್ರಸಿದ್ದ ವ್ಯೆದ್ಯರಾದ ಡಾ. ಕೆ. ಆರ್. ಪಾಟೀಲ ಅವರು ಆಯ್ಕೆಯಾಗಿದ್ದಾರೆ. ವಾಲ್ಮೀಕಿ ಸಮುದಾಯದ ಏಳ್ಗೆಗಾಗಿ ಅಪಾರ ಸೇವೆ ಸಲ್ಲಿಸಿರುವ ಇವರು ಮೂಲತ ವೈದ್ಯಕೀಯ ಕ್ಷೇತ್ರದವರು.
(ಇ.ಎನ್.ಟಿ ಸರ್ಜನ್) 1980 ರಲ್ಲಿ ಧಾರವಾಡದಲ್ಲಿ ನಾಯಕ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಂಸ್ಥೆಯ ಅಭಿವೃದ್ಧಿ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ, ಎಸ್.ಸಿ ಮತ್ತು ಎಸ್.ಟಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಸರಕಾರದ ನೆರವಿನಿಂದ ಹಾಸ್ಟೇಲ್ ಸ್ಥಾಪಿಸಿದ್ದಾರೆ.
1985 ರಿಂದ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜ ಹಿತಾಬಿವೃದ್ಧಿ ಸಂಘದ ನಿರ್ದೇಶಕರಾಗಿ ಮತ್ತು 1998 ರಿಂದ ಉಪಾದ್ಯಕ್ಷರಾಗಿ ಹಾಗೂ ಸದ್ಯಕ್ಕೆ ಅದ್ಯಕ್ಷರಾಗಿ ಸೇವೆ ಸಲ್ಲಿಸುತಿದ್ದಾರೆ.
ವಾಲ್ಮೀಕಿ ಗುರು ಪೀಠ ರಾಜೇನಹಳ್ಳಿ ಸ್ಥಾಪನೆಗಾಗಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಸಮಾಜದ ಜನರ ಸಂಘಟನೆಯಲ್ಲಿ ತೊಡಗಿದ್ದರು. ಹಿರೇಕೆರೂರ ಮತ್ತು ಧಾರವಾಡದಲ್ಲಿ ಸಮಾಜದ ರಾಜ್ಯಮಟ್ಟದ ಸಮ್ಮೇಳನ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ರಾಜ್ಯ ವಾಲ್ಮೀಕಿ ನಾಯಕ ನೌಕರರ ಮಹಾಸಂಘ ಬೆಂಗಳೂರು ಇದರ ಉಪಾದ್ಯಕ್ಷರಾಗಿ ಹಾಗು ಬೆಂಗಳೂರಿನ ಅಖಿಲ ಭಾರತ ನಾಯಕ ಸಂಘದ ಸಲಹಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಹುಬ್ಬಳ್ಳಿಧಾರವಾಡದಲ್ಲಿ ಅನೇಕ ಪ್ರಶಸ್ತಿಗಳಿಗೆ ಭಾಜನಾಗಿದ್ದಾರೆ.
Kshetra Samachara
01/11/2020 01:42 pm