ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಲ್ಬರ್ಗ : ಹಣ್ಣೆಲೆ- ಚಿಗುರೆಲೆ ನಡುವಿನ ಒಲವಿನಾಟ..!

ಗುಲ್ಬರ್ಗ : ಮುಪ್ಪು ಬಾಲ್ಯ ಎರೆಡು ಅವಿನಾಭಾವ ಸಂಬಂಧ ಹೊಂದಿದ್ದು ಈ ಎರಡಕ್ಕೂ ಒಂದು ಊರುಗೋಲು ಬೇಕೆ ಬೇಕು.

ಬಾಲ್ಯದಲ್ಲಿ ಮಕ್ಕಳ ಪಾಲನೆ ಪೋಷಣೆ ಮಾಡಿದ ಪಾಲಕರಿಗೆ ಮುಂದೊಂದು ದಿನ ಮಕ್ಕಳು ಆಸರೆಯಾಗಬೇಕು.

ಸದ್ಯ ನೀವು ಗಮನಿಸುತ್ತಿರುವ ಈ ವಿಡಿಯೋದಲ್ಲಿ ವಯೋವೃದ್ದರೊಬ್ಬರು ವಾಕರ್ ಹಿಡಿದು ತಮ್ಮ ನಡಿಗೆ ಆರಂಭಿಸಿದ್ದರೆ ಆ ವಾಕರ್ ಒಳಗೆ ಮಗುವೊಂದು ಆಟವಾಡುತ್ತಾ ನಡೆಯುತ್ತಿದೆ ಕ್ಷಣಕಾಲ ಈ ವಿಡಿಯೋ ಗಮನಿಸಿದರೇ ಯಾರಿಗಾರು ಆಸರೆ ? ಎಂದು ನಮ್ಮಲ್ಲೊಂದು ಭಾವನೆ ಜೊತೆ ತುಟಿ ಅಂಚಲ್ಲಿ ನಗು ಚಿಮ್ಮೊದು ಸಹಜ ಬಿಡಿ.

ಈ ವಿಡಿಯೋವನ್ನು ಸುಧಾಕರ್ ಚಿಕೆ ಎಂಬುವರು ಗುಲ್ಬರ್ಗ ಜಿಲ್ಲೆಯ ತಮ್ಮೂರು ಹುಮ್ನಾಬಾದನಲ್ಲಿ ಸೆರೆ ಹಿಡಿದು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು 446 ಲೈಕ್ಸ್ ಪಡೆದು ಬರೋಬ್ಬರಿ 746 ಸಾರಿ ಶೇರ್ ಆಗಿದ್ದು 41.000 ವ್ಹೀವ್ಸ್ ಪಡೆದುಕೊಂಡಿದೆ ಆ ಮುಪ್ಪಿನ ಜೊತೆ ಬಾಲ್ಯದ ತುಂಟಾಟ ಜನರ ಮನ ಗೆದ್ದಿದೆ.

Edited By : Manjunath H D
Kshetra Samachara

Kshetra Samachara

14/10/2020 11:28 am

Cinque Terre

15.78 K

Cinque Terre

2

ಸಂಬಂಧಿತ ಸುದ್ದಿ