ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಿಮಿಕ್ರಿ ಅರುಣ ನಟಶ್ರೇಷ್ಠರ ಶೈಲಿ ಅನುಕರಣೆ ನಿಪುಣ!

ಪಬ್ಲಿಕ್ ನೆಕ್ಸ್ಟ್ ವಿಶೇಷ-ಈರಣ್ಣ ವಾಲಿಕಾರ

ಮಿಮಿಕ್ರಿ ಅರುಣ

ಹುಬ್ಬಳ್ಳಿ- ಕನ್ನಡ ಚಿತ್ರರಂಗದ ದಿಗ್ಗಜ ನಟರ ಮಿಮಿಕ್ರಿ ಮಾಡುವುದು ಕಷ್ಟ. ಅಂತಹುದರಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಲಾವಿದರ ಶೈಲಿಯನ್ನು ನಟನೆ ಮಾಡುವ ಮೂಲಕ ಇಲ್ಲೊಬ್ಬ ಕಾಲೇಜ ವಿದ್ಯಾರ್ಥಿ ತನ್ನ ವಿಶಿಷ್ಟ ಪ್ರತಿಭೆಯನ್ನ ಅನಾವರಣ ಗೊಳಿಸುತ್ತಿದ್ದಾನೆ...

ಹೀಗೇ ಕನ್ನಡ ಚಿತ್ರದ ಮೇರು ನಟರ ಮಿಮಿಕ್ರಿ ಮಾಡುತ್ತಿರುವ ಈತನ ಹೆಸರು ಅರುಣಕುಮಾರ್ ಹಳ್ಳಿಕೇರಿ. ಮೂಲತ ಹುಬ್ಬಳ್ಳಿಯ ವಿರಾಪೂರ ಓಣಿಯ ನಿವಾಸಿ. ಚಿಕ್ಕ ವಯಸ್ಸಿನಿಂದ ಕನ್ನಡ ಚಿತ್ರ ರಂಗಕ್ಕೆ ಕಾಲಿಡಬೇಕು ಎಂದು ಆಸೆ ಹೊತ್ತಿದವ.

ನಟ ಸಾರ್ವಭೌಮ ಡಾ. ರಾಜಕುಮಾರ, ಸಾಹಸಸಿಂಹ ವಿಷ್ಣುವರ್ಧನ್, ಅಂಬರೀಶ್, ಕರಾಟೆ ಕಿಂಗ್ ಶಂಕರನಾಗ್, ಶಿವರಾಜ್ ಕುಮಾರ್, ರವಿಚಂದ್ರನ್ ಸೇರಿದಂತೆ ಇನ್ನೂ ಹಲವು ಮೇರು ನಟರ ಮಿಮಿಕ್ರಿ ಮಾಡುವ ಈತ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಹಾಗೂ ಅವಕಾಶಕ್ಕಾಗಿ ಕಾಯುತ್ತಿದ್ದಾನೆ.

ನಗರದಲ್ಲಿ ಹಲವಾರು ಸ್ಟೇಜ್ ಪ್ರೋಗ್ರಾಂ ನೀಡಿರುವ ಅರುಣ, ತನ್ನ ಮುಗ್ಧ ನಟನೆಯಿಂದ ಹುಬ್ಬಳ್ಳಿ ಜನರನ್ನು ರಂಜಿಸುವ ಮೂಲಕ ಎಲ್ಲರ ಮನ ಗೆದ್ದಿದ್ದಾನೆ. ಕಲೆ ಸಂಸ್ಕ್ರತಿಗೆ ಹೆಸರಾಗಿರುವ ಧಾರವಾಡ ಜಿಲ್ಲೆ. ಇಂತಹ ಹಲವಾರು ಪ್ರತಿಭೆಗಳು ಬೆಳೆದು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಒಟ್ಟಿನಲ್ಲಿ ಮಿಮಿಕ್ರಿ ಮೂಲಕ ಹುಬ್ಬಳ್ಳಿ ಹುಡುಗ, ಕನ್ನಡಕ್ಕೆ ಎಂಟ್ರಿ ನೀಡಲು ಹವಣಿಸುತ್ತಿರುವ ಅರುಣ ಕನಸು, ನನಸಾಗಲಿ ಆದಷ್ಟು ಬೇಗ ಈತನ ಕಲೆ‌ ಮೆಚ್ಚಿ ನಿರ್ದೇಶಕರು ಅವಕಾಶ ಕಲ್ಪಿಸಲಿ ಎನ್ನುವುದೇ ಎಲ್ಲರ ಅಭಿಲಾಷೆ.

Edited By :
Kshetra Samachara

Kshetra Samachara

11/10/2020 11:59 am

Cinque Terre

66.38 K

Cinque Terre

16

ಸಂಬಂಧಿತ ಸುದ್ದಿ