ಧಾರವಾಡ: ಬಣ್ಣ ಬಣ್ಣದ ಚಿತ್ತಾರ... ನೋಡ್ತಿದ್ರೆ ನೋಡುತ್ತಲೇ ಇರಬೇಕೆನಿಸುವ ರಂಗೋಲಿಯ ಕಲಾಕೃತಿಗಳು. ಮದುವಣಗಿತ್ತಿಯಂತೆ ಶೃಂಗಾರಗೊಂಡ ಹಾರ್ಟ್ ಕೇರ್ ಸೆಂಟರ್. ಅಷ್ಟಕ್ಕೂ ಇಂತಹದೊಂದು ರಂಗುರಂಗಿನ ವಾತಾವರಣಕ್ಕೆ ಸಾಕ್ಷಿಯಾಗಿದ್ದು, ಎಸ್.ಡಿ.ಎಂ ನಾರಾಯಣ ಹಾರ್ಟ್ ಕೇರ್ ಸೆಂಟರ್. ವಿಶ್ರಾಂತಿ ಇಲ್ಲದೇ ಶ್ರಮಿಸುವ ಹೃದಯಕ್ಕೆ ಧಾರವಾಡದ ಎಸ್.ಡಿ.ಎಂ ನಾರಾಯಣ ಹೃದಯಾಲಯದಲ್ಲಿ ವಿಶೇಷ ಗೌರವ ನೀಡುವ ಮೂಲಕ ವಿಶ್ವ ಹೃದಯ ದಿನವನ್ನು ಆಚರಣೆ ಮಾಡಲಾಯಿತು.
ಧಾರವಾಡದ ಎಸ್.ಡಿ.ಎಂ ನಾರಾಯಣ ಹೃದಯಾಲಯದಿಂದ ವಿಶ್ವ ಹೃದಯ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವ ಮೂಲಕ ಸಾರ್ವಜನಿಕರು ಹೃದಯದ ಬಗ್ಗೆ ಕಾಳಜಿ ವಹಿಸುವಂತೆ ಕರೆ ನೀಡಲಾಯಿತು. ವಿಶ್ವ ಹೃದಯ ದಿನದ ಕಾರ್ಯಕ್ರಮಕ್ಕೆ ಡಾ.ರವಿವರ್ಮ ಪಾಟೀಲ ಹಾಗೂ ಬಾಲ ನಟಿ ಶಾರ್ವರಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ತೋಡಾ ದಿಲ್ ತೋಡಾ ಹಾರ್ಟ್ ಎಂಬುವಂತ ಘೋಷ ವ್ಯಾಕ್ಯದೊಂದಿಗೆ ಇಂತಹದೊಂದು ಕಾರ್ಯಕ್ಕೆ ಮುನ್ನುಡಿ ಬರೆಯಲಾಗಿದೆ.
ಇನ್ನೂ ಸುಮಾರು ವರ್ಷಗಳಿಂದ ಹೃದಯಕ್ಕೆ ಸಂಬಂಧಿಸಿದ ಆರೋಗ್ಯದ ಕುರಿತು ಜಾಗೃತಿಯ ಜೊತೆಗೆ ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ನಾರಾಯಣ ಹೃದಯಾಲಯ ತನ್ನ ಕಾರ್ಯವನ್ನು ಮಾಡುತ್ತಿದೆ. ಅಲ್ಲದೇ ವಿಶ್ರಾಂತಿ ಇಲ್ಲದೇ ಮನುಷ್ಯನ ಜೀವಿತದ ಜೊತೆಗೂ ಕೆಲಸ ಮಾಡುವ ಹೃದಯದ ಆರೋಗ್ಯದ ಬಗ್ಗೆ ಹಿರಿಯ ವೈದ್ಯರು ಹಾಗೂ ಹೃದಯ ತಜ್ಞರು ಮಾಹಿತಿ ನೀಡಿದರು.
ಒಟ್ಟಿನಲ್ಲಿ ನಾರಾಯಣ ಹಾರ್ಟ್ ಕೇರ್ ಸೆಂಟರ್ ವಿಶ್ವ ಹೃದಯ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿರುವುದು ಮಾತ್ರವಲ್ಲದೇ ಹೃದಯದ ಬಗ್ಗೆ ವಿಶೇಷ ಜಾಗೃತಿ ಮೂಡಿಸಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/09/2022 08:39 pm