ನಾವೆಲ್ಲ ವಿಶ್ವ ಹೃದಯ ದಿನದ ಸಂಭ್ರಮದಲ್ಲಿದ್ದೇವೆ. ಇತ್ತೀಚಿನ ದಿನಗಳಲ್ಲಿ ಮಧ್ಯ ವಯಸ್ಕರಿಗಿಂತ ಯುವಜನರಲ್ಲೇ ಹೃದಯಾಘಾತಗಳು ಹೆಚ್ಚಾಗುತ್ತಿವೆ. ಇದಕ್ಕೆ ಅವರ ತಪ್ಪು ಆಹಾರ ಕ್ರಮವೂ ಒಂದು ಕಾರಣ ಎನ್ನುತ್ತಾರೆ ಧಾರವಾಡದ ಎಸ್‌ಡಿಎಮ್ ನಾರಾಯಣ ಹೃದಯಾಲಯದ ವೈದ್ಯ ಡಾ. ಗಣೇಶ್ ನಾಯಕ್.
ಯುವಜನರು ವ್ಯಾಯಾಮ ಮಾಡಿ ಆರೋಗ್ಯದಿಂದ ಇರಲು ಬಯಸುತ್ತಾರೆ. ಆದ್ರೆ ಅವರು ಆಹಾರ ಉಪಕ್ರಮಗಳಲ್ಲಿ ಅಶಿಸ್ತಿನಿಂದ ಇರುತ್ತಾರೆ. ಇನ್ನೂ ಕೆಲವರು ಆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುತ್ತಾರೆ. ಇದಕ್ಕೆ ಒತ್ತಡದ ಬದುಕು ಕೂಡ ಒಂದು ಕಾರಣ ಆಗಿರಬಹುದು. ಹೀಗಾಗಿ ನಾವು ಸೇವಿಸುವ ಆಹಾರ ನಮ್ಮ ಹೃದಯದ ಆರೋಗ್ಯಕ್ಕೆ ಪೂರಕವಾಗಿರಬೇಕು ಎಂದು ಡಾ. ಗಣೇಶ್ ನಾಯಕ್ ಅವರು ವಿಶ್ವ ಆರೋಗ್ಯ ದಿನದ ಸಂದರ್ಭದಲ್ಲಿ ಹೃದಯಪೂರ್ವಕ ಸಲಹೆ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/09/2022 08:17 pm