ಹುಬ್ಬಳ್ಳಿ: ಸರ್ಕಾರಿ ಆಸ್ಪತ್ರೆ ಅಂದ್ರೆ ನಮಗೆ ಅಲ್ಲಿಯ ಬಗ್ಗೆ ಒಂದು ಕೆಟ್ಟ ಅನುಭವದ ಕಲ್ಪನೆ ಇದ್ದೇ ಇರುತ್ತೆ. ಆದರೆ, ಹುಬ್ಬಳ್ಳಿಯಲ್ಲಿನ ಈ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆಗಳಿಗೆ ಮಾದರಿ ಎನ್ನುವಂತೆ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ, ಬಡರೋಗಿಗಳಿಗೆ ಸಂಜೀವಿನಿಯಾಗಿ ಇಲ್ಲಿಯ ವೈದ್ಯರು ಕಾರ್ಯ ನಿರ್ವಹಿಸುತ್ತಾ ಸದ್ಯ ಹೊಸದೊಂದು ಸಾಧನೆ ಮಾಡಿದ್ದಾರೆ. ಅಷ್ಟಕ್ಕೂ ಯಾವ ಆಸ್ಪತ್ರೆ ಅಂತೀರಾ, ಈ ಸ್ಟೋರಿ ನೋಡಿ...
ಹೌದು... ಈ ದೃಶ್ಯಗಳಲ್ಲಿ ನೀವು ನೋಡುವ ಆಸ್ಪತ್ರೆ, ಖಾಸಗಿ ಆಸ್ಪತ್ರೆ ಅಲ್ಲವೇ ಅಲ್ಲ! ಇದು ಅಪ್ಪಟ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾಗಿರುವ ಹುಬ್ಬಳ್ಳಿಯ ಚಿಟಗುಪ್ಪಿ ಹೆರಿಗೆ ಆಸ್ಪತ್ರೆ. ಇಷ್ಟೊಂದು ಕ್ಲೀನ್, ಅಚ್ಚುಕಟ್ಟಾಗಿ ಈ ಆಸ್ಪತ್ರೆ ಇರುವುದರ ಜೊತೆಗೆ ಇಲ್ಲಿಯ ವೈದ್ಯರು ಬಡಜನರಿಗೆ ದೇವರಂತೆ ತೆರೆಮರೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಹೀಗೆ ಬೆಡ್ ಮೇಲೆ ಕುಳಿತು ಆನಂದ ಬಾಷ್ಪದೊಂದಿಗೆ ಮಾತನಾಡಿದ ಮಹಿಳೆ ಹೆಸರು ನಸ್ರೀನ್ ಬಾನು. ಈಕೆ ಗರ್ಭಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಓಪನ್ ಸರ್ಜರಿ ಮಾಡಿದ್ದರೆ ಇವರಿಗಿರುವ ವಯೋಸಹಜ ಕಾಯಿಲೆಯಿಂದ ಸಾಕಷ್ಟು ತೊಂದರೆ ಆಗುವ ಸಾಧ್ಯತೆ ದಟ್ಟವಾಗಿತ್ತು. ಇದಕ್ಕಾಗಿ ವಿಶೇಷ ಕಾಳಜಿ ವಹಿಸಿದ ಡಾ.ಶ್ರೀಧರ್ ದಂಡೆಪ್ಪನವರ, ಖಾಸಗಿ ಸ್ನೇಹಿತರ ಬಳಿಯಿಂದ ಲ್ಯಾಪೋಸ್ಕೋಪಿ ಮೆಷಿನ್ ಪಡೆದು ಸರ್ಜರಿ ಮಾಡಿ ಗರ್ಭಕೋಶದಲ್ಲಿದ್ದ ಕ್ಯಾನ್ಸರ್ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.
ಇನ್ನು, ಮುಂದಿನ ದಿನಗಳಲ್ಲಿ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಹೊಸ ಕಟ್ಟಡದೊಂದಿಗೆ 100 ಹಾಸಿಗೆಗಳ ಜೊತೆಗೆ ಅತ್ಯಾಧುನಿಕ ಚಿಕಿತ್ಸೆ ಸಾರ್ವಜನಿಕರಿಗೆ ಸಿಗಲಿದೆ.
- ವಿನಯ ರೆಡ್ಡಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
18/09/2022 04:28 pm