ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜಂಕ್ ಫುಡ್‌ನಿಂದ ಜೀವಕ್ಕೆ ಧಕ್ಕೆ: ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್‌ನಿಂದ ತಪಾಸಣೆ ಶಿಬಿರ

ಧಾರವಾಡ: ಆಧುನಿಕ ಜೀವನ ಶೈಲಿಯ ಆಹಾರ, ವಿಹಾರ, ವಿಚಾರ ಮತ್ತು ಧೂಮಪಾನ, ಮಧ್ಯಪಾನ, ದುಶ್ಚಟ, ಖಿನ್ನತೆ, ಮಾನಸಿಕ ಒತ್ತಡದಿಂದಾಗಿ ಮಾನವ ವಿವಿಧ ಖಾಯಿಲೆಗೆ ತುತ್ತಾಗುತ್ತಿದ್ದಾನೆ ಹೀಗಾಗಿ ಮನುಷ್ಯರಲ್ಲಿ ರಕ್ತದೊತ್ತಡ, ಸಕ್ಕರೆ ಖಾಯಿಲೆ ಸೇರಿದಂತೆ ಹೃದಯದ ಮೇಲೆ ಅತ್ಯಂತ ಪರಿಣಾಮ ಬೀರಲಿದೆ ಎಂದು ಎಸ್.ಡಿ.ಎಂ ನಾರಾಯಣ ಹಾರ್ಟ್ ಸೆಂಟರ್ ಧಾರವಾಡದ ಹೃದಯರೋಗ ತಜ್ಞರಾದ ಡಾ. ಮಂಜುನಾಥ ಪಂಡಿತ ಹೇಳಿದರು.

ಎಸ್.ಡಿ.ಎಂ ನಾರಾಯಣ ಹಾರ್ಟ್ ಸೆಂಟರ್, ಧಾರವಾಡ ಹಾಗೂ ಕೇಶವ ನಗರ ಕ್ಷೇಮಾಭಿವೃದ್ದಿ ಸಂಘ (ರಿ) ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದಂತಹ ಉಚಿತ ಹೃದಯರೋಗ ತಪಾಸಣಾ ಶಿಬಿರವನ್ನು ಉದ್ಘಾಟಿಸಿದ ಮಾತನಾಡಿದ ಅವರು, ಒತ್ತಡದ ಜೀವನದಲ್ಲಿ ಸಿಲುಕಿರುವ ಮನುಷ್ಯ ತನ್ನ ಆರೋಗ್ಯದ ಬಗ್ಗೆ ಯಾವುದೆ ತರಹದ ಮುಂಜಾಗ್ರತೆ ವಹಿಸುತ್ತಿಲ್ಲ ಹೀಗಾಗಿ ಹೃದಯ ರೋಗ ಮತ್ತು ಹೃದಯಾಘಾತಕ್ಕೆ ಸಿಲುಕುತ್ತಿದ್ದಾರೆ ಎಂದರು.

ಸಾತ್ವಿಕ ಆಹಾರ ಬಳಸದೆ ಕೇವಲ ಜಂಕ್ ಫುಡ್‍ಗಳಿಗೆ ಮಾರು ಹೋಗಿ ರಕ್ತದೊತ್ತಡ, ಅಧಿಕ ಬೊಜ್ಜು, ತೂಕದಲ್ಲಿ ಹೆಚ್ಚಳತೆ ಮಾಡಿಕೊಂಡು ಆರೋಗ್ಯವನ್ನು ನಿರ್ಲಕ್ಷ ಮಾಡುತ್ತಿದ್ದಾರೆ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವವರು ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಅವಶ್ಯ ಜೊತೆಗೆ ತಜ್ಞ ವೈದ್ಯರನ್ನು ಸಂಪರ್ಕಿಸುತ್ತಲೇ ಇರಬೇಕು ಎಂದ ಅವರು, ಖಾಯಿಲೆ ಕಾಣಿಸಿಕೊಂಡರೆ ತಜ್ಞ ವೈದ್ಯರಿಂದ ತಪಾಸಣೆ, ರಕ್ತದೊತ್ತಡ, ಹಾಗೂ ಕೊಲೆಸ್ಟ್ರಾಲ್, ರಕ್ತದ ಸಕ್ಕರೆ ತಪಾಸಣೆ ಮಾಡಿಸಬೇಕು ಎಂದರು.

ಎದೆ ಬಡಿತ, ಕತ್ತು ನೋವು, ಎಡ ಭಾಗದ ಭುಜದ ಹಾಗೂ ಕೈ ಸೆಳೆತ, ನಡೆದಾಡುವಾಗ ಅಥವಾ ಏರಿಳಿತದ ರಸ್ತೆಯಲ್ಲಿ ಹೋಗುವಾಗ ಉಸಿರಾಟ ತೊಂದರೆಗಳು ಹೃದಯ ರೋಗದ ಲಕ್ಷಣಗಳಾಗಿವೆ. ಹೃದಯ ನೋವು ಇದ್ದಾಗ ಅದು ಸಾಮಾನ್ಯ ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಇರಬಹುದು ಎಂದು ನಿರ್ಲಕ್ಷ ತೋರಬಾರದು ಹೃದಯ ರೋಗದ ಪರಿಹಾರಕ್ಕಾಗಿ ಜೀವನದ ಶೈಲಿಯಲ್ಲಿ ಬದಲಾವಣೆ ತರುವುದು, ರಕ್ತದೊತ್ತಡ, ಹಾಗೂ ಕೊಲೆಸ್ಟ್ರಾಲ್, ರಕ್ತದ ಸಕ್ಕರೆ ಪ್ರಮಾಣಕ್ಕೆ ಸೂಕ್ತವಾದ ಔಷದೋಪಚಾರ ಅಗತ್ಯವಾಗಿದೆ ಎಂದರು.

ಈ ಶಿಬಿರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನರು ಉಚಿತವಾಗಿ ಬಿಪಿ, ಆರ ಬಿ ಎಸ್, ಇಸಿಜಿ, ಎಕೋ ಮತ್ತು ವೈದ್ಯರ ಸಮಾಲೋಚನೆಯನ್ನು ಪಡೆದರು. ಈ ಸಂದರ್ಭದಲ್ಲಿ ಎಸ್. ಡಿ.ಎಂ ನಾರಾಯಣ ಹಾರ್ಟ್ ಸೆಂಟರ್‌ನ ಡಾ. ಮಹಾಂತೇಶ ಉಳ್ಳಾಗಡ್ಡಿ, ಅಜಯ ಹುಲಮನಿ, ದುಂಡೇಶ ತಡಕೋಡ, ಹು-ಧಾ ಮಹಾನಗರ ಪಾಲಿಕೆಯ ಸದಸ್ಯರಾದ ವಿಷ್ಟು ಕೊರ್ಲಹಳ್ಳಿಯವರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

17/09/2022 08:43 pm

Cinque Terre

10.9 K

Cinque Terre

0

ಸಂಬಂಧಿತ ಸುದ್ದಿ