ಹುಬ್ಬಳ್ಳಿ: ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ನಿಮ್ಮ ಪಬ್ಲಿಕ್ ನೆಕ್ಸ್ಟ್ ಈಗ ಉಚಿತ ಆರೋಗ್ಯ ಶಿಬಿರದ ಮೂಲಕ ತನ್ನ ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸಲು ಮುಂದಾಗಿದೆ. ಮಹಾನಗರ ಪಾಲಿಕೆ ಸದಸ್ಯೆ ರೂಪಾ ದಯಾನಂದ್ ಶೆಟ್ಟಿ ಅವರ ಸಹಯೋಗದಲ್ಲಿ ಶಿಬಿರ ನಡೆಯಲಿದೆ.
ಹೃದಯ ರೋಗ ತಜ್ಞರು, ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞ ವೈದ್ಯರು,ಹಾಗೂ ನುರಿತ ವೈದ್ಯರಿಂದ ಉಚಿತ ಸಮಾಲೋಚನೆ. ಇದರೊಂದಿಗೆ ಉಚಿತ ನೇತ್ರ, ಶ್ರವಣ ತಪಾಸಣೆ ಶಿಬಿರ.
ಬ್ಲಡ್ ಶುಗರ್, ರಕ್ತದೊತ್ತಡ ಹಾಗೂ ರಕ್ತ ತಪಾಸಣೆ, ಇಸಿಜಿ
ಈ ಉಚಿತ ಆರೋಗ್ಯ ಶಿಬಿರದಲ್ಲಿ ಸುಮಾರು ಎರಡುವರೆ ಸಾವಿರದಿಂದ ಮೂರು ಸಾವಿರದವರೆಗಿನ ವೆಚ್ಚದ ಎಲ್ಲ ತಪಾಸಣೆಗಳನ್ನು ಉಚಿತವಾಗಿ ಮಾಡಲಾಗುವುದು.
ಈ ಶಿಬಿರದಲ್ಲಿ ಎಲ್ಲ ವಯೋಮಾನದವರ ಆರೋಗ್ಯ ತಪಾಸಣೆಗೆ ಮುಕ್ತ ಅವಕಾಶವಿದೆ.
ಬನ್ನಿ, ನುರಿತ ವೈದ್ಯರಿಂದ ನಿಮ್ಮ ಆರೋಗ್ಯ ಪರೀಕ್ಷಿಸಿ, ಸಲಹೆ ಮಾರ್ಗದರ್ಶನ ಪಡೆಯಿರಿ.
ಇದೇ ಜುಲೈ 24 ಭಾನುವಾರದಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:00 ವರೆಗೆ ನಡೆಯಲಿದೆ.
ಸ್ಥಳ- ಹುಬ್ಬಳ್ಳಿಯ ವಿದ್ಯಾನಗರದ ಸುಧರ್ಮ ಕಲ್ಯಾಣ ಮಂಟಪ. ಎಬಿಬಿಎಂ ಹಾಸ್ಟೆಲ್, ಗಣೇಶ ಮಂದಿರ ಹತ್ತಿರ ವಿದ್ಯಾನಗರ ಹುಬ್ಬಳ್ಳಿ
ಅವಳಿ ನಗರ ಜನಾರೋಗ್ಯವೇ ಪಬ್ಲಿಕ್ ನೆಕ್ಸ್ಟ್ ಆಶಯ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- 9972157058, 8867722291, 8722646108
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/07/2022 06:57 pm