ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಹರಭಟ್ಟ ಪದವಿಪೂರ್ವ ಕಾಲೇಜಿನಲ್ಲಿ ಮಕ್ಕಳ ಯೋಗ

ಕುಂದಗೋಳ : ಪಟ್ಟಣದ ಹರಭಟ್ಟ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಎಂಟನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅಂತಾರಾಷ್ಟ್ರೀಯ ಯೋಗ ಪಟು ಚೈತ್ರಾ ಡೊಳ್ಳಿನ ನೇತೃತ್ವದಲ್ಲಿ ಎಲ್ಲ ಮಕ್ಕಳು ಯೋಗ ಮಾಡುವ ಮೂಲಕ ಆಚರಿಸಿದರು.

ಹರಭಟ್ಟ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಹರಭಟ್ಟ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳಿಗೆ ಯೋಗಾಸನದ ಕುರಿತಂತೆ ಅಂತಾರಾಷ್ಟ್ರೀಯ ಯೋಗ ಪಟು ಚೈತ್ರಾ ಡೊಳ್ಳಿನ ಯೋಗ ತಿಳಿಸಿದರು.

ಕಾರ್ಯಕ್ರಮವನ್ನು ಸಂಸ್ಥೆ ಚೇರಮನ್ ಅರವಿಂದಪ್ಪ ಕಟಗಿ ಉದ್ಘಾಟಿಸಿದರು. ಬೆಳಿಗ್ಗೆ 8 ಗಂಟೆಯಿಂದ ಆರಂಭವಾದ ಯೋಗ ಕಾರ್ಯಕ್ರಮ ಒಂದು ಗಂಟೆಗೂ ಅಧಿಕ ಕಾಲ ನಡೆಯಿತು. ಈ ಸಂದರ್ಭದಲ್ಲಿ ಮಕ್ಕಳಿಗೆ ಯೋಗ ಕಲಿಸಿದ ಅಂತಾರಾಷ್ಟ್ರೀಯ ಯೋಗ ಪಟು ಚೈತ್ರಾ ಡೊಳ್ಳಿನ ಅವರನ್ನು ಸನ್ಮಾನಿಸಲಾಯಿತು.

Edited By : Manjunath H D
Kshetra Samachara

Kshetra Samachara

21/06/2022 01:22 pm

Cinque Terre

12.62 K

Cinque Terre

0

ಸಂಬಂಧಿತ ಸುದ್ದಿ