ಹುಬ್ಬಳ್ಳಿ: ಮಾನಸಿಕ ಅಸ್ವಸ್ಥನೊಬ್ಬ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿರುವ ಪಾಲಿಕೆ ಕಟ್ಟಡದ ಮೇಲೆ ಹತ್ತಿ ಎಲ್ಲರಲ್ಲೂ ಆತಂಕ ಸೃಷ್ಟಿಸಿದ್ದಾನೆ.
ಮಾನಸಿಕ ಅಸ್ವಸ್ಥತ ವ್ಯಕ್ತಿ ಮೂಲತಃ ಆಂಧ್ರ ಪ್ರದೇಶದ ನಿವಾಸಿ ಎನ್ನಲಾಗಿದೆ. ಏಕಾಏಕಿ ಕಟ್ಟಡ ಹತ್ತಿ ಕುಳಿತು ಹೈ ಡ್ರಾಮಾ ಮಾಡಿದ್ದಾನೆ. ಇನ್ನು ಸ್ಥಳೀಯರು ಹಾಗೂ ಪಾಲಿಕೆ ಸಿಬ್ಬಂದಿ ಪೊಲೀಸರು ಆತನನ್ನು ಇಳಿಸಲು ಹರಸಾಹಸ ಪಡುತ್ತಿದ್ದಾರೆ. ತೆಲುಗು ಭಾಷೆ ಮಾತನಾಡುತ್ತಿರುವ ಆತ ಯಾಕೇ ಅಲ್ಲಿ ಹತ್ತಿದ್ದ ಎನ್ನುವುದು ನಿಗೂಢವಾಗಿದೆ. ಇನ್ನು ತೆಲುಗು ಮಾತಾನಾಡಿ ನನ್ನ ಸಾಯಸಿಬೇಡಿ ಎಂದು ಹೇಳುತ್ತಿದ್ದಾನೆ.
Kshetra Samachara
20/06/2022 02:41 pm