ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ತಾಲೂಕ ಮಟ್ಟದ ವಿಶೇಷ ಆರೋಗ್ಯ ಜಾಗೃತಿ ಮೇಳ

ಕಲಘಟಗಿ : ಪಟ್ಟಣದ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಉಚಿತ ಆರೋಗ್ಯ ಮೇಳ ಹಾಗೂ ಆರೋಗ್ಯ ಜಾಗೃತಿ ಮೇಳ ಜರುಗಿತು.

ಈ ಸಂದರ್ಭದಲ್ಲಿ ಉಚಿತ ಪ್ರಯೋಗಾಲಯ ಪರೀಕ್ಷೆ ಉಚಿತ ಔಷಧಿ ವಿತರಣೆ ಕ್ಷಯ ರೋಗ ಪರೀಕ್ಷೆ ರಕ್ತದಾನ ಯೋಗಾಭ್ಯಾಸ ಹೀಗೆ ಹಲವಾರು ಕಾರ್ಯಕ್ರಮ ಹಮ್ಮಿಕೋಳ್ಳಲಾಗಿತ್ತು. ಅದರ ಜೊತೆಗೆ ಉಚಿತ ಆರೋಗ್ಯ ಕಾರ್ಡ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಾಡಿರುವ ಪೌಷ್ಟಿಕ ಆಹಾರ ಎಲ್ಲರ ಗಮನ ಸೆಳೆಯುವಂತಾಗಿತ್ತು. ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ಮತ್ತು ಕಿಶೋರಿಯರಿಗೆ ಯಾವ ರೀತಿ ಆಹಾರ ಸೆವನೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಎಲ್ಲ ರೀತಿಯ ಪದಾರ್ಥಗಳನ್ನು ಅಲ್ಲಿ ನೋಡಲಿಕ್ಕೆ ಇಟ್ಟು ಬಂದಿರುವ ಸಾರ್ವಜನಿಕರಿಗೆ ಮಾಹಿತಿ ನಿಡಲಾಗುತ್ತಿತ್ತು.

ಈ ಕಾರ್ಯಕ್ರಮದಲ್ಲಿ ಸಿ.ಎಂ.ನಿಂಬಣ್ಣವರ, ಜಿಲ್ಲಾ ಆರೋಗ್ಯಾಧಿಕಾರಿ ಬಿ.ಸಿ.ಕರಿಗೌಡರ ತಾಲೂಕ ಆರೋಗ್ಯಾಧಿಕಾರಿ ಬಸವರಾಜ ಬಾಸೂರ ಇನ್ನು ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

26/04/2022 10:19 pm

Cinque Terre

18.26 K

Cinque Terre

0

ಸಂಬಂಧಿತ ಸುದ್ದಿ