ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಯುರ್ವೇದ ಸಾಧಕ '' ಔಕ್ಷವಂತ ಆರೋಗ್ಯಾಲಯದ '' ಶ್ರೀ ಯೋಗೇಂದ್ರ ಶಿಂದೆಜಿ

"ಆಯುರ್ವೇದ '' ನಮ್ಮ ಪ್ರಾಚೀನ ಔಷಧ ಹಾಗೂ ಚಿಕಿತ್ಸಾ ಪದ್ಧತಿ. ಆಧುನಿಕ ಔಷಧಿಗಳು ರೋಗಲಕ್ಷಣ ಕೇಂದ್ರೀಕರಿಸಿ ಅವುಗಳ ಚಿಕಿತ್ಸೆಗೆ ಪ್ರಯತ್ನಿಸಿದರೆ, ಆಯುರ್ವೇದವು ರೋಗನಿರೋಧಕ ಶಕ್ತಿ ಹೆಚ್ಚಿಸಿ ದೇಹದ ಜೀವಕೋಶಗಳನ್ನು ಆಂತರಿಕವಾಗಿಯೇ ಬಲಪಡಿಸಿ ರೋಗ ಗುಣಪಡಿಸಲು ಸಹಾಯ ಮಾಡುತ್ತದೆ.

ಸಂಸ್ಕೃತದಲ್ಲಿ " ಆಯು ಅಂದರೆ ಆಯಸ್ಸು ವೇದ ಅಂದರೆ ಜ್ಞಾನ ''. ಪುರಾತನವಾದ ನಮ್ಮ ಔಷಧಿ ಪದ್ಧತಿಯ "ಆಯುರ್ವೇದ '' ದಲ್ಲಿ ತಾಯಿಯ ಗರ್ಭದಲ್ಲಿ ಪ್ರತಿ ತಿಂಗಳ ಭ್ರೂಣ ಬೆಳವಣಿಗೆ, ರಚನೆ, ಪೋಷಕಾಂಶ ಪಾಲನೆ ವಿವರವಿದೆ. ಚರಕ ಸಂಹಿತೆ, ಶುಶ್ರುತ ಸಂಹಿತೆ ಇವೇ ಮೊದಲಾದ ಸಂಹಿತೆಗಳಲ್ಲಿ ಶಸ್ತ್ರಚಿಕಿತ್ಸೆಯ ಬಗ್ಗೆ ಮಾಹಿತಿಯೂ ಲಭ್ಯ.

ಹುಬ್ಬಳ್ಳಿಯ ಪಾರಂಪರಿಕ "ಆಯುರ್ವೇದ '' ವೈದ್ಯ ಶ್ರೀ ಯೋಗೇಂದ್ರ ಬಾಲಕೃಷ್ಣ ಶಿಂದೆಜಿ ಅವರು ಕಳೆದ ಎರಡು ದಶಕಗಳಿಂದ ಎಲೆ ಮರೆಯ ಕಾಯಿಯಂತೆ ರೋಗಿಗಳ ಸೇವೆಯಲ್ಲಿ ತತ್ಪರಗಾಗಿದ್ದಾರೆ.

ಶ್ರೀ ಯೋಗೇಂದ್ರ ಬಾಲಕೃಷ್ಣ ಶಿಂಧೆಜಿ ಅವರನ್ನು "ಆಯುರ್ವೇದ '' ತಪಸ್ವಿ ಎಂದರೂ ಅತಿಶಯೋಕ್ತಿ ಆಗದು. ಆಯುರ್ವೇದ ಚಿಕಿತ್ಸೆ ಹಾಗೂ ಔಷಧಿ ನೀಡಿಕೆ ಇವರ ತಾತ ಮುತ್ತಾತರಿಂದ ಬಂದ ಬಳುವಳಿ. ಸುಮಾರು ಏಳು ತಲೆಮಾರಿನಿಂದ ಈ ಪಾರಂಪರಿಕ ವೈದ್ಯಕೀಯ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಯೋಗೇಂದ್ರ ಶಿಂಧೆಜಿ ಅವರು ಅಪಾರ ದೈವಿಭಕ್ತರು. ಆಯುರ್ವೇದದಲ್ಲಿ ಪರಿಣಿತಿಯೊಂದಿಗೆ ದೇವಿಯ ಆರಾಧಕರಾಗಿರುವ ಇವರಿಗೆ, ಅವರ ತಂದೆಯಾದ ಶ್ರೀ ಬಾಲಕೃಷ್ಣ ಶಿಂಧೆಯವರು ಆಯುರ್ವೇದದ ಅಪಾರ ಜ್ಞಾನ ಹಾಗೂ ಅನುಭವವನ್ನು ಧಾರೆ ಎರೆದ್ದಾರೆ.

ಅಗಾಧವಾದ ಅನುಭವ ಹಾಗೂ ಹರಿದ್ವಾರದಲ್ಲಿ ಪಡೆದ ಸೂಕ್ತ ತರಬೇತಿಯಿಂದಾಗಿ ಶ್ರೀ ಯೋಗೇಂದ್ರ ಅವರು ಇಂದು ಪಾರಂಪರಿಕ ವೈದ್ಯಕೀಯ ಚಿಕಿತ್ಸೆಯಲ್ಲಿ ಇವರು ಈಗ ಸಿದ್ಧಹಸ್ತರಾಗಿದ್ದಾರೆ.

"ದೇಶದ ಜನಸಂಖ್ಯೆಯಲ್ಲಿ ಶೇ.80 ರಷ್ಟು ಜನ ಡಯಾಬಿಟಿಸ್, ಬ್ಲಡ್ ಪ್ರಶರ್ ದಿಂದ ಬಳಲುತ್ತಿದ್ದಾರೆ. ಇದರೊಂದಿಗೆ ವಯೋಸಹಜವಾಗಿ ಬರುವ ಕಾಯಿಲೆಗಳು ಹಾಗೂ ದಂಪತಿಗಳಲ್ಲಿ ಕಂಡು ಬರುವ ಬಂಜೆತನ.''

ಹೀಗಾಗಿ ಚಿಕಿತ್ಸೆಗಾಗಿ ನನ್ನಲ್ಲಿ ಬರುವವರು ರೋಗಿಗಳಲ್ಲಿ, ಅವರು ನನ್ನ ಪಾರಂಪರಿಕ ಚಿಕಿತ್ಸೆಗೆ ಸವಾಲು ಎಸೆಯಲು ಬಂದಿದ್ದಾರೆ ಎಂದು ಭಾವಿಸಿ, ಅವರ ಸವಾಲು ಸ್ವೀಕರಿಸಿ ಚಿಕಿತ್ಸೆ ನೀಡಲು ಮುಂದಾಗುತ್ತೇನೆ . ಪ್ರತಿಯೊಬ್ಬರೂ ನನಗೆ ಹೊಸ ಹೊಸ ಅನುಭವ ನೀಡುತ್ತಾರೆ '' ಎಂದು ಮಾರ್ಮಿಕವಾಗಿ ಹೇಳುತ್ತಾರೆ ಶ್ರೀ ಯೋಗೇಂದ್ರಜಿ.

ಚಿಕಿತ್ಸೆ ಜೊತೆ ರೋಗಿಗಳಿಗೆ ಕೌನ್ಸಿಲಿಂಗ್ ಅತಿ ಮುಖ್ಯ. ಇತ್ತೀಚೆಗೆ ಇಲ್ಲಿಯ ಶ್ರೇಯಾ ನಗರದಲ್ಲಿ, ತ್ವತ್ವದರ್ಶ ಆಸ್ಪತ್ರೆ ಪಕ್ಕದಲ್ಲಿ ಆರಂಭವಾದ '' ಔಕ್ಷವಂತ ಅತ್ಯಾಧುನಿಕ ಆರೋಗ್ಯಾಲಯ'' ರೋಗಿಗಳ ಚಿಕಿತ್ಸೆಗೆ ಸಜ್ಜಾಗಿದೆ. ಬಡ ರೋಗಿಗಳಿಗೆ ಚಿಕಿತ್ಸೆಯೊಂದಿಗೆ ಕಡಿಮೆ ದರದಲ್ಲಿ ಔಷಧಿ ನೀಡಿದ ಔಕ್ಷವಂತದ ಹೃದಯವಂತವಂತರೂ ಹೌದು.

ಮಾನಸಿಕ ಸ್ವಾಸ್ಥ್ಯ + ದೈಹಿಕ ಸ್ವಾಸ್ಥ್ಯ= ಆರ್ಥಿಕ ಸ್ವಾಸ್ಥ್ಯಎಂಬುದೇ ಇವರ ಧ್ಯೇಯವಾಕ್ಯ. ಇಲ್ಲಿ ವಿವಿಧ ಕಾಯಿಲೆಗಳಿಗೆ ದೊರೆಯುವ ಚಿಕಿತ್ಸೆ ಹಾಗೂ ಆಯುರ್ವೇದ ಪದ್ಧತಿ ಔಷಧಗಳ ಬಗ್ಗೆ ಸ್ವತಹಃ ಯೋಗೇಂದ್ರ ಶಿಂಧೆ ಅವರು ಹಂತ ಹಂತವಾಗಿ ವಿವರಿಸಲಿದ್ದಾರೆ.

ಡಾ. ಅನುಷಾ ಏಕಬೋಟೆ (ಬಿಎಎಮ್ಎಸ್, ಎಂ.ಡಿ)ಮತ್ತು ಡಾ.ನೇಹಾ ಶಿಂದೆ (ಬಿಎಎಮ್ಎಸ್) ಶ್ರೀ ಯೋಗೇಂದ್ರಜಿ ಅವರ ಜೊತೆಗೆ ಪ್ರತಿ ಹಂತದಲ್ಲಿಯೂ ಸಹಾಯಕರಾಗಿ ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರೊಂದಿಗೆ ನಿರ್ದೇಶಕರಾಗಿ ಅರುಣ್ ಹಬೀಬ್, ನಾಗರಾಜ ಮಾಕಾವಿ, ಡಾ. ದೀಪ್ತಿ ಬಿಜಾಪುರ ( ಪಿ.ಎಚ್.ಡಿ ಜಿಯೋಗ್ರಾಫಿ ) ಹಾಗೂ ಕೃಷ್ಣೇಂದ್ರ ಶಿಂದೆ ಅವರು ಔಕ್ಷವಂತ ಆರೋಗ್ಯಾಲಯದಲ್ಲಿ ತಮ್ಮ ಕಾರ್ಯ ಸಲ್ಲಿಸುತ್ತಿದ್ದಾರೆ.

ಇದಲ್ಲದೆ ಶ್ರೀ ಯೋಗೇಂದ್ರಜಿ ಅವರ ಇಬ್ಬರು ಮಕ್ಕಳಾದ ಕೃಷ್ಣೇಂದ್ರ ಮತ್ತು ನಂದಿತಾ ಸಹ ಬಿಎಎಮ್ಎಸ್ ಶಿಕ್ಷಣ ಪಡೆಯುತ್ತಿದ್ದು ಅವರೂ ತಂದೆಯ ಆಯುರ್ವೇದ ಚಿಕಿತ್ಸಾ ಅಭಿಯಾನದಲ್ಲಿ ಕೈಜೋಡಿಸುತ್ತಿದ್ದಾರೆ.

ವಿಳಾಸ: ಔಕ್ಷವಂತ ಆರೋಗ್ಯಾಲಯ,

ಆಯುರ್ವೇದಕ ಹೆಲ್ತ್ ಕೇರ್ ಸೆಂಟರ್.

ಗ್ರೌಂಡ್ ಪ್ಲೂವರ್ 2, ಮನೋಹರ ಹೈಟ್ಸ್,

ಶ್ರೆಯಾ ನಗರ, ತತ್ವದರ್ಶ ಆಸ್ಪತ್ರೆ ರಸ್ತೆ, ಹುಬ್ಬಳ್ಳಿ,,

ಹೆಚ್ಚಿನ ಮಾಹಿತಿಗಾಗಿ:- 0836-2956455/ 9148264455

Edited By : Manjunath H D
Kshetra Samachara

Kshetra Samachara

03/01/2022 10:03 am

Cinque Terre

43.73 K

Cinque Terre

4

ಸಂಬಂಧಿತ ಸುದ್ದಿ