ಕುಂದಗೋಳ : ಕಾರ್ಮಿಕರ ಆರೋಗ್ಯ ರಕ್ಷಣೆ ಮತ್ತು ರೋಗಗಳಿಗೆ ಸೂಕ್ತ ಚಿಕಿತ್ಸೆಗಾಗಿ ಈದೀಗ ಕಾರ್ಮಿಕರನ್ನು ಅರಸಿ ಶ್ರಮಿಕ್ ಸಂಜೀವಿನಿ ಸಂಚಾರಿ ವಾಹನ ಇಂದು ಕುಂದಗೋಳ ತಹಶೀಲ್ದಾರ ಕಚೇರಿ ತಲುಪಿ ಸ್ಥಳೀಯ ಕಾರ್ಮಿಕರ ಆರೋಗ್ಯ ತಪಾಸಣೆಗೆ ಮುಂದಾಗಿದೆ.
ಮೊನ್ನೆ ತಾನೇ ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟಿಸಿದ ಶ್ರಮಿಕ್ ಸಂಜೀವಿನಿ ಸಂಚಾರಿ ವಾಹನ ಇಂದು ಕುಂದಗೋಳ ಪಟ್ಟಣಕ್ಕೆ ಬಂದು ಲೇಬರ್ ಕಾರ್ಡ್ ಹೊಂದಿದ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಹಾಗೂ ರೋಗ ಲಕ್ಷಣಗಳಿದ್ದಲ್ಲಿ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದು, ಲೇಬರ್ ಕಾರ್ಡ್ ಹೊಂದದೆ ಇರುವವರಿಗೆ ಆರೋಗ್ಯ ತಪಾಸಣೆ ಮಾತ್ರ ಕೈಗೊಳ್ಳುತ್ತಿದ್ದಾರೆ.
ಈ ಶ್ರಮಿಕ್ ಸಂಚಾರಿ ವಾಹನ ಪ್ರಾಥಮಿಕ ಚಿಕಿತ್ಸೆಗೆ ಬೇಕಾದ ಸಕಲ ಸೌಲಭ್ಯಗಳನ್ನು ಒಳಗೊಂಡಿದ್ದು, ಕಾರ್ಮಿಕರಿಗೆ ಚಿಕಿತ್ಸೆ ನೀಡಲು ವಾಹನದ ಜೊತೆ ಒಬ್ಬ ವೈದ್ಯಾಧಿಕಾರಿ ಸೇರಿ ಐದು ಜನ ವೈದ್ಯಕೀಯ ಸಿಬ್ಬಂದಿಗಳನ್ನು ಒಳಗೊಂಡಿದೆ.
ಇಂದು ಕುಂದಗೋಳಕ್ಕೆ ಬಂದ ಶ್ರಮಿಕ್ ಸಂಜೀವಿನಿ ಸಂಚಾರಿ ವಾಹನ ಜ.3ರ ಸೋಮವಾರ ಬೆಳಗ್ಗೆ ಹಳೇ ಹುಬ್ಬಳ್ಳಿ, ಮಧ್ಯಾಹ್ನ ಘಂಟಿಕೇರಿ ಓಣಿ, ತಲುಪಿ ಮುಂದೆ ಗೋಪನಕೊಪ್ಪ, ಬೈರಿದೇವರಕೊಪ್ಪ, ಕಲಘಟಗಿ, ನವಲಗುಂದ, ಅಣ್ಣಿಗೇರಿ, ಹೊಸ ಯಲ್ಲಾಪೂರ, ಗೋಕುಲ, ತಾರಿಹಾಳ ತುಲಪಿ ಮುಂದಿನ ಶನಿವಾರ ಮರಳಿ ಕುಂದಗೋಳಕ್ಕೆ ಬರಲಿದ್ದು ಕಟ್ಟಡ ಕಾರ್ಮಿಕರು ಇದರ ಪ್ರಯೋಜನ ಪಡೆಯಬೇಕಿದೆ.
-ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
01/01/2022 02:13 pm