ಹುಬ್ಬಳ್ಳಿ: ಕಾರ್ಮಿಕ ಇಲಾಖೆ ಆಸ್ಪತ್ರೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳು ಒಂದು ಅವಾಂತರ ಮಾಡಿದ್ದಾರೆ.
ಕಾರವಾರ ರಸ್ತೆಯಲ್ಲಿರುವ ಇಎಸ್ಐ ಆಸ್ಪತ್ರೆಯ ಅಧಿಕಾರಿಗಳು, ದಸರಾ ಆಯುಧಪೂಜೆ ಅಂಗವಾಗಿ ಐಸಿಯುನಲ್ಲೆ ಪೂಜೆ ಪುನಸ್ಕಾರ ಮಾಡಿದ್ದಾರೆ. ಇಎಸ್ ಐ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ಕೊಠಡಿ ಹಾಗೂ ತೀವ್ರ ನಿಗಾ ಘಟಕದಲ್ಲಿ ರಂಗೋಲಿ ಹಾಕಿ ವಿಶೇಷ ಪೂಜೆ ಸಲ್ಲಿಸಿದ್ದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿದೆ. ಕೆಲ ಸಿಬ್ಬಂದಿಗಳು ವಿರೋಧದ ಮಧ್ಯೆಯೂ ವಿಶೇಷ ಪೂಜೆ ಸಲ್ಲಿಸಿ ಆಯುಧ ಪೂಜೆ ನೇರವೇರಿಸಿದ್ದಾರೆ ಎಂದು ತಿಳಿದುಬಂದಿದೆ.
Kshetra Samachara
14/10/2021 03:35 pm