ಹುಬ್ಬಳ್ಳಿ: ಮಜೇಥಿಯಾ ಫೌಂಡೇಶನ್ ಸ್ಥಾಪಿಸಿ ಇಂದಿಗೆ 13 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೆ. 22 ರಂದು ಸಂಜೆ 4:30 ಗುಜರಾತ್ ಭವನದಲ್ಲಿ ಫೌಂಡೇಶನ್ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಂಡಿದೆ ಎಂದು ಮಜೇಥಿಯಾ ಫೌಂಡೇಶನ್ ಅಧ್ಯಕ್ಷೆ ನಂದಿನಿ ಕಶಪ್ ಮಜೇಥಿಯಾ ಹೇಳಿದರು.
2008 ರಲ್ಲಿ ಪ್ರಾರಂಭಿಸಲಾದ ಮಜೇಥಿಯಾ ಫೌಂಡೇಶನ್ ಹಲವಾರು ಸಮಾಜಮುಖಿ ಕೆಲಸ ಮಾಡುತ್ತಾ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಹಿನ್ನೆಲೆ ಮಹಿಳೆಯರು ಅನುಕೂಲಕ್ಕೆ ವಾಟರ್ ವ್ಹೀಲ್, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಕಾಲು ಕಳೆದುಕೊಂಡ ವ್ಯಕ್ತಿಗಳಿಗೆ ಕೃತಕ ಕಾಲು ಜೋಡಣೆ ಶಿಬಿರ ಆಯೋಜನೆ ಮಾಡಿದೆ.
ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೇಜರ್, ಗ್ರಾಮೀಣ ಭಾಗದಲ್ಲಿ ಆಕ್ಸಿಜನ್ ಸಾಂದ್ರಕಗಳನ್ನು ಒದಗಿಸಿದ್ದೇವೆ. ಕೊರೋನಾ ಸಂಖ್ಯೆ ಹೆಚ್ಚಾದಾಗ 21 ಸ್ವಯಂ ಸೇವಕರನ್ನು ಕಿಮ್ಸ್ ನೀಡಿದ್ದೇವೆ. ಮೇ ಐ ಹೆಲ್ಪ ಯೂ ಮೂಲಕ ಕಿಮ್ಸ್ ಗೆ ಗ್ರಾಮೀಣ ಪ್ರದೇಶದಿಂದ ಬರುವ ಜನರಿಗೆ ಸಹಾಯ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜ ಮುಖಿ ಮಾಡುವ ಉದ್ದೇಶ ಹೊಂದಿರುವ ಮಜೇಥಿಯಾ ಫೌಂಡೇಶನ್ ಕಿಮ್ಸ್ ಆವರಣದಲ್ಲಿ ಎರಡು ಊಟದ ಮನೆ ನಿರ್ಮಿಸುತ್ತಿದೆ. ಹಿರಿಯ ನಾಗರಿಕರಿಗೆ ವಸತಿ ಗೃಹ ನಿರ್ಮಾಣ, ನಿರುದ್ಯೋಗಿ ಯುವಕರಿಗೆ ಕೌಶಲ್ಯ ನೀಡುವ ಉದ್ದೇಶದಿಂದ ಸ್ಕೀಲ್ ಟ್ರೇನಿಂಗ್ ಸೆಂಟರ್ ಪ್ರಾರಂಭಿಸುವ ಗುರಿ ಹೊಂದಿದ್ದೇವೆ ಎಂದರು.
ಸೆ.22 ರಂದು ನಡೆಯುವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕೆ.ಜಿ.ಎಸ್.ಎಸ್ ಟ್ರಸ್ಟ್ ಚೇರ್ಮನ್ ಕನಯ್ಯಾ ಲಾಲ್ ಥಕ್ಕರ್ ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ ಆಶಾ ಹಾರ್ಟ್ ಆ್ಯಂಡ್ ಡಯಾಬಿಟಿಕ್ ಫೌಂಡೇಶನ್ ಸಂಸ್ಥಾಪಕ ಡಾ.ಜಿ.ಬಿ.ಸತ್ತೂರ ಭಾಗವಹಿಸಲಿದ್ದು, ಅಂದು ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ಡಾಕ್ಟರ್ಸ್, ನರ್ಸ್, ಫ್ರಂಟ್ ಲೈನ್ ವಾರಿಯರ್ಸ್, ಸಮಾಜ ಸೇವಕರಿಗೆ ಸನ್ಮಾನಿಸಲಾಗುವುದು ಎಂದರು.
Kshetra Samachara
20/09/2021 12:41 pm