ಕುಂದಗೋಳ : ಮಕ್ಕಳು ಹಾಗೂ ಗರ್ಭಿಣಿಯರು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಮುಂದೊಂದು ದಿನ ಗಂಭೀರ ಆರೋಗ್ಯದ ಸಮಸ್ಯೆ ಕಾರಣವಾಗಬಹುದು ಎಂದು ಮಹಿಳಾ ಮಕ್ಕಳ ಇಲಾಖೆಯ ಮೇಲ್ವಿಚಾರಕಿ ರಾಜೇಶ್ವರಿ ಬಡಿಗೇರ್ ಹೇಳಿದರು
ಅವರು ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿರುವ ಪೌಷ್ಟಿಕ ಆಹಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಉಪಯುಕ್ತ ಆಹಾರ ಸೇವನೆ ಹಾಗೂ ರಕ್ತ ಹೀನತೆ ಕುರಿತು ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಸೊರಟೂರ್ ಮಾತನಾಡಿ ಮನೆಯಲ್ಲಿ ದಿನನಿತ್ಯ ಬಳಸುವ ತರಕಾರಿಗಳನ್ನು ಸ್ವಚ್ಛವಾಗಿ ತೊಳೆದು ತಿನ್ನುವುದು ಸೂಕ್ತ ಎಂದು ಹೇಳಿದರು. ಬಾಲ ವಿಕಾಸ ಸಮಿತಿ ಸದಸ್ಯ ಬಸವರಾಜ ಯೋಗಪ್ಪನವರ್ ಮಾತನಾಡಿ ಅಂಗನವಾಡಿಯಲ್ಲಿ ಕೊಡುವಂತ ಆಹಾರವನ್ನು ಸರಿಯಾಗಿ ಮಕ್ಕಳಿಗೆ ಹಾಗೂ ಗರ್ಭಿಣಿಯರು ತೆಗೆದುಕೊಳ್ಳಬೇಕು ಶೇಂಗಾ ಕಾಳನ್ನು ದಿನನಿತ್ಯ ನೆನೆಸಿ ತಿನ್ನುವುದರಿಂದ ಮಕ್ಕಳು ಸದೃಢವಾಗಿ ಜನಿಸುತ್ತವೆ. ಈ ಶೇಂಗಾ ಬಡವರ ಬಾದಾಮಿ ಇದ್ದಂತೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಕ್ರಪ್ಪ ಕಮ್ಮಾರ, ತಾಯವ್ವ ಕೆಂಚಣ್ಣನವರ, ನೀಲವ್ವ ಹೊಸಳ್ಳಿ, ಶಂಕ್ರವ್ವ ಹೊಸಳ್ಳಿ, ಮಲ್ಲಿಕಾರ್ಜುನ ರೆಡ್ಡಿ, ಬಸುರಾಜ ಕುರಣಿ, ಯಲ್ಲವ್ವ ಹುಲಿಕಟ್ಟಿ, ಶೋಭಾ ಯೋಗಪ್ಪನವರ, ನಾಗರತ್ನ ದಾನಮ್ಮನವರ, ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಗರ್ಭಿಣಿಯರು ಕಿಶೋರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Kshetra Samachara
16/09/2021 09:05 pm