ಧಾರವಾಡ : ನಗರದ ಕರ್ನಾಟಕ ಕಲಾ ಕಾಲೇಜಿನ ಸಮಾಜ ಕಾರ್ಯ ವಿಭಾಗ ಮತ್ತು ಡಿಮ್ಹಾನ್ಸ್ ಸಂಸ್ಥೆ ಸಹಯೋಗದೊಂದಿಗೆ "ಕೋವಿಡ್ ಸಂದರ್ಭದಲ್ಲಿ ಮಾನಸಿಕ ಆರೋಗ್ಯದ ರಕ್ಷಣೆ" ಎಂಬ ವಿಷಯದ ಕುರಿತು ವೆಬನಾರ್ ಜರುಗಿತು.
ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ಸತೀಶ್ ಕೌಜಲಗಿ ಮಾತನಾಡಿ, ಪ್ರಸ್ತುತ ಕೊವಿಡ್ ಪರಿಸ್ಥಿತಿಯಲ್ಲಿ ನಮ್ಮ ಆಲೋಚನೆ, ಭಾವನೆ ಮತ್ತು ಒತ್ತಡವನ್ನು ನಿರ್ವಹಿಸಬೇಕಾದ ಅವಶ್ಯಕತೆ ಇದ್ದು, ಅದಕ್ಕಾಗಿ ದೈಹಿಕ ಆರೋಗ್ಯಕ್ಕೆ ಎಷ್ಟು ಮಹತ್ವ ನೀಡುತ್ತೇವೆ ಅಷ್ಟೇ ಮಹತ್ವವನ್ನು ಮಾನಸಿಕ ಆರೋಗ್ಯಕ್ಕೆ ನೀಡಬೇಕಾದ ಅವಶ್ಯಕತೆ ಇದೆ ಹಾಗಾಗಿ ಅವರು ದೈನಂದಿನ ಜೀವನದಲ್ಲಿ ಉತ್ತಮ ಹವ್ಯಾಸ, ಆತ್ಮವಿಶ್ವಾಸ ಮತ್ತು ಸಂತೋಷವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು, ಜೊತೆಗೆ ಚಟುವಟಿಕೆಯಿಂದ ಇರಬೇಕು . ನಿತ್ಯ ಜೀವನದಲ್ಲಿ ಸಕರಾತ್ಮಕ ಚಿಂತನೆ, ದೈಹಿಕ ಚಟುವಟಿಕೆ, ಧ್ಯಾನ, ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದರು.
ಡಿಮ್ಹಾನ್ಸ್ ಸಂಸ್ಥೆಯ ಸಮುದಾಯ ಮಾನಸಿಕ ಆರೋಗ್ಯ ಸೇವೆಗಳ ಸಂಯೋಜಕ ಅಶೋಕ ಕೋರಿ ಮಾತನಾಡಿ ,ಮಾನಸಿಕ ಖಾಯಿಲೆಗಳ ಕುರಿತು ಜನರಲ್ಲಿ ತಪ್ಪು ಕಲ್ಪನೆಗಳು ಇವೆ ಗ್ರಾಮೀಣ ಮಟ್ಟದ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸಮಾಜ ಕಾರ್ಯ ವಿದ್ಯಾರ್ಥಿಗಳಿಂದ ಸಾಧ್ಯ , ವೈಜ್ಞಾನಿಕ ರೀತಿಯಲ್ಲಿ ಎಲ್ಲಾ ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪರಿಹಾರ ಇದೆ .ಆದ್ದರಿಂದ ಸಮುದಾಯ ಮಟ್ಟದಲ್ಲಿ ಮಾನಸಿಕ ಆರೋಗ್ಯದ ಕುರಿತು ಜನರಿಗೆ ಅರಿವು ಮೂಡಿಸಬೇಕಾಗಿದೆ ಎಂದರು.
ವೆಬಿನಾರ್ ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಬಿ.ಕರಡೊಣಿ, ಸಮಾಜ ಕಾರ್ಯ ವಿಭಾಗದ ಸಂಯೋಜಕ ಡಾ.ಬಸವರಾಜ ಎನ್, ಉಪನ್ಯಾಸಕಿ ಲಕ್ಷ್ಮಿ ದಡ್ಡಿ, ಡಾ.ಗೀತಾ ಪಾಸ್ತೆ, ಉಪನ್ಯಾಸಕರಾದ ಗುರು ಪ್ರಸಾದ ಹೆಗಡೆ, ಪ್ರೊ.ಬಸವಲಿಂಗಪ್ಪ, ಪ್ರೊ.ಸಚಿನ್ ನಾಯಕ್, ಸೇರಿದಂತೆ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
Kshetra Samachara
06/08/2021 11:26 am