ಹುಬ್ಬಳ್ಳಿ- ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಕೊರೊನಾ ಮಹಾಮಾರಿ ಎರಡನೇ ಅಲೆಗೆ ಸಜ್ಜಾಗಿದ್ದು, ಧಾರವಾಡ ಜಿಲ್ಲಾಡಳಿತವು ಸೂಕ್ತ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ. ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಆದೇಶ ಬಂದ್ರೆ ತಕ್ಷಣವೇ ಜಾರಿ ಮಾಡುತ್ತವೆ ಎಂದು ಸಾರಿಗೆ ವಿಭಾಗ ನಿಯಂತ್ರಣಾಧಿಕಾರಿ ಎಚ್.ರಾಮನಗೌಡ ತಿಳಿಸಿದ್ದಾರೆ.
ಮೊದಲ ಹಂತದ ಕೊರೊನಾ ಅಲೆಯಿಂದಾಗಿ ಈಗಾಗಲೇ ಜನತೆ ತತ್ತರಿಸಿ ಹೋಗಿದ್ದು, ಇದೀಗ ಮತ್ತೇ ಎರಡನೇ ಅಲೆಯ ಭೀತಿ ಎದುರಾಗಿದೆ.
ಪ್ರತಿದಿನ ಅವಳಿನಗರಗಳಾದ ಹುಬ್ಬಳ್ಳಿ-ಧಾರವಾಡಕ್ಕೆ ಗಡಿ ಭಾಗಗಳಾದ ಮುಂಬೈ, ಮಹಾರಾಷ್ಟ್ರದಿಂದ ಹತ್ತಾರು ಬಸ್ ಗಳು ಆಗಮಿಸುತ್ತಿದ್ದು, ಅಲ್ಲಿಂದ ಆಗಮಿಸುವ ಸಾವಿರಾರು ಪ್ರಯಾಣಿಕರಿಗೆ ಯಾವುದೇ ಮುಂಜಾಗ್ರತಾ ಕ್ರಮಗಳು ಅನುಸರಿಸುತ್ತಿಲ್ಲ.
ಹೀಗಾಗಿ ಸಧ್ಯ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಲ್ಲಿ ಯಾವುದೇ ಕೋವಿಡ್ ತಪಾಸಣೆ, ಸೈನಿಟೈಸನ್ ಮಾಡುವುದರ ಬಗ್ಗೆ ಜಿಲ್ಲಾಡಳಿತ ಯಾವುದೇ ನಿರ್ಣಯವನ್ನು ತೆಗೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸರಿಯಾದ ತಪಾಸಣೆಗಳನ್ನು ನಿರ್ಲಕ್ಷ್ಯ ಮಾಡಿದರೇ ಎರಡನೇ ಹಂತ ಕೊರೊನಾ ಅಲೆ ವಕ್ಕರಿಸುವ ಸಾಧ್ಯತೆಗಳು ಹೆಚ್ಚಿವೆ...
ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಲಾಕ್ ಡೌನ್ ಗೆ ಮುಂದಾಗಿದೆ. ಆದರೆ ಇತ್ತ ಧಾರವಾಡ ಜಿಲ್ಲಾಡಳಿತದಿಂದ ಯಾವುದೇ ನಿರ್ದೇಶನ ಬಂದಿಲ್ಲ.
ನಿರ್ದೇಶನ ಬಂದ ಮೇಲೆ ಅಧಿಕಾರಗಳು ಎಚ್ಚೆತ್ತುಕೊಂಡು ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ..
Kshetra Samachara
20/02/2021 08:30 pm