ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಹತ್ವದ ಕಾರ್ಯಕ್ಕೆ ಮುನ್ನುಡಿ ಬರೆಯಲಿದೆ ಕೆಎಂಸಿ ಆರ್ ಐ, ಶೀಘ್ರದಲ್ಲೇ ಐವಿಎಫ್ ಕೇಂದ್ರ ಆರಂಭ..!

ಹುಬ್ಬಳ್ಳಿ: ಒಂದಿಲ್ಲೊಂದು ರೀತಿಯಲ್ಲಿ ವಿನೂತನ ಕಾರ್ಯಗಳತ್ತ ದಾಪುಗಾಲು ಹಾಕುತ್ತಿರುವ ಕೆಎಂಸಿ ಆರ್ ಐ ಈಗ ಮತ್ತೊಂದು ಕಾರ್ಯಕ್ಕೆ ಮುನ್ನುಡಿ ಬರೆಯಲು ಮುಂದಾಗಿದೆ. ಮಕ್ಕಳಿಲ್ಲದ ದಂಪತಿಗೆ ಮಕ್ಕಳ ಭಾಗ್ಯ ಕರುಣಿಸುವ ಐವಿಎಫ್ (ಇನ್ ವಿಟ್ರೋ ಫರ್ಟಿಲೈಜೇಷನ್) ಕೇಂದ್ರ ಶೀಘ್ರವೇ ಇಲ್ಲಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ (ಕೆಎಂಸಿಆರ್‌ಐ) ಆರಂಭವಾಗಲಿದೆ. ಈ ಮೂಲಕ ರಾಜ್ಯದಲ್ಲಿಯೇ ಸರ್ಕಾರಿ ಸ್ವಾಮ್ಯದ ಮೊದಲ ಐವಿಎಫ್ ಕೇಂದ್ರ ಇದಾಗಲಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಖಾಸಗಿ ಐವಿಎಫ್ ಕೇಂದ್ರಗಳು 17 ಇವೆ ಎಂಬ ಅಂದಾಜಿದೆ. ಮಧ್ಯಮ ಹಾಗೂ ಮೇಲ್ವರ್ಗದವರು ಬಿಟ್ಟರೆ ಬಡವರು ಇತ್ತ ಧಾವಿಸುವುದು ಕಷ್ಟಸಾಧ್ಯ. ಇದನ್ನು ಮನಗಂಡಿರುವ ರಾಜ್ಯ ಸರ್ಕಾರವು ಕೆಎಂಸಿಆರ್‌ಐನಲ್ಲಿ ಐವಿಎಫ್ ಕೇಂದ್ರ ತೆರೆಯಲು ಅಸ್ತು ಎಂದಿತ್ತು. ಈಗ ಟೆಂಡರ್ ಕರೆದಿದ್ದು, ಅ.11ರಂದು ಅಂತಿಮಗೊಳ್ಳಲಿದೆ. ಸಿವಿಲ್ ಕಾಮಗಾರಿಗೆ ರಾಜ್ಯ ಸರ್ಕಾರವು 46.7 ಲಕ್ಷ ರೂ. ಬಿಡುಗಡೆ ಮಾಡಿದೆ. ಟೆಂಡರ್ ಪ್ರಕ್ರಿಯೆ ಅಂತಿಮಗೊಂಡ ಮರುದಿನವೇ ಕಾಮಗಾರಿ ಆರಂಭಕ್ಕೆ ಆದೇಶ ಹೊರಡಿಸಲು ನಿರ್ಧರಿಸಲಾಗಿದೆ.

ಇನ್ನೂ ಯಂತ್ರೋಪಕರಣ ಐವಿಎಫ್ ಸೆಂಟರ್‌ಗೆ ಅಗತ್ಯ ಖರೀದಿಗೆ ವಿವಿಧ ಕಂಪನಿಗಳ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕಾ ನಿಧಿ (ಸಿಎಸ್‌ಆರ್ ಫಂಡ್) ಬಳಕೆ ಮಾಡಲಾಗುತ್ತಿದೆ. ಅಂದಾಜು 50 ಲಕ್ಷ ರೂ. ಬೇಕಾಗಬಹುದು ಎಂಬ ಅಂದಾಜಿದೆ. ಮಹಿಳೆಯರ ಜನಸಂಖ್ಯೆ ಆಧಾರಿತ ಹಾಗೂ 15 ರಿಂದ 49 ವಯಸ್ಸು ಪರಿಗಣನೆ ಮೇಲೆ 2024ರ ಫಲವಂತಿಕೆ ಪ್ರಮಾಣ ಭಾರತದಲ್ಲಿ 2.12 (ಓರ್ವ ಮಹಿಳೆಗೆ ಮಕ್ಕಳ ಜನನ ಪ್ರಮಾಣ) ಇದೆ. ಗ್ರಾಮೀಣ ಭಾಗದಲ್ಲಿ 2.5 ಇದ್ದರೆ, ನಗರವಾಸಿ ಮಹಿಳೆಯರಲ್ಲಿ ಫಲವಂತಿಕೆ ಪ್ರಮಾಣ 1.8ರಷ್ಟಿದೆ. ಕರ್ನಾಟಕದಲ್ಲಿ 1.7ರಷ್ಟು ಫಲವಂತಿಕೆ ಇರುವುದು ವರದಿಗಳು ಹೇಳುತ್ತಿವೆ. ಉತ್ತರ ಕರ್ನಾಟಕ ಭಾಗದಲ್ಲಿಯೂ ಇದೇ ಪ್ರಮಾಣದಲ್ಲಿ ಕಂಡುಬರುತ್ತಿದೆ ಎಂಬುದು ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರಜ್ಞರ ಅಭಿಮತ.

ತಡವಾಗಿ ಮದುವೆಯಾಗುವುದು, ಹಾರ್ಮೋನ್ ವ್ಯತ್ಯಾಸ, ಅಂಡಾಣು ಬೆಳವಣಿಗೆ ಕುಸಿತ ಸೇರಿ ಇತರ ಕಾರಣಗಳಿಂದ ಸಂತಾನಶಕ್ತಿ ಕುಗ್ಗುತ್ತ ಹೋಗುತ್ತದೆ. ಸಾಮಾನ್ಯವಾಗಿ ವಯಸ್ಸಿಗೆ ಅನುಗುಣವಾಗಿ ಸಂತಾನಶಕ್ತಿ ಇಳಿಮುಖವಾಗುವ ಸಾಧ್ಯತೆಯೂ ಇದೆ. ಕೃತಕ ಗರ್ಭಧಾರಣೆ (ಐಯುಐ, ಐವಿಎಫ್) ಚಿಕಿತ್ಸೆಯ ಪರಿಣಾಮದಿಂದ ಬಹಳಷ್ಟು ಮಹಿಳೆಯರು ಮಕ್ಕಳನ್ನು ಪಡೆಯುವ ಪರಿಸ್ಥಿತಿ ಬಂದಿದೆ. ಹಾಗಾಗಿಯೇ, ಉತ್ತರ ಕರ್ನಾಟಕದ ಸಂಜೀವಿನಿ ಕೆಎಂಸಿಆರ್‌ಐನಲ್ಲಿ ಐವಿಎಫ್ ಕೇಂದ್ರ ಆರಂಭಕ್ಕೆ ಕಾಲಕೂಡಿ ಬಂದಿದೆ. ಇದರ ಆರಂಭದಿಂದ ಆರ್ಥಿಕವಾಗಿ ಸಬಲರಲ್ಲದ ದಂಪತಿಗೆ ಅನುಕೂಲವಾಗಲಿದೆ.

Edited By : Suman K
Kshetra Samachara

Kshetra Samachara

08/10/2024 01:37 pm

Cinque Terre

18.92 K

Cinque Terre

1

ಸಂಬಂಧಿತ ಸುದ್ದಿ