ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಚಿಕಿತ್ಸೆ ಸಿಗದೇ ಪ್ರಾಣ ಬಿಟ್ಟ ಶ್ವಾನ, ಪಶು ಆಸ್ಪತ್ರೆ ವಿರುದ್ಧ ರೈತರು ಗರಂ

ಕುಂದಗೋಳ: ವಾಹನ ಚಕ್ರ ತಾಗಿ ಗಾಯಗೊಂಡಿದ್ದ ಶ್ವಾನವನ್ನು ಪಶು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ವೈದ್ಯಾಧಿಕಾರಿಗಳು ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದ ಕಾರಣ ಶ್ವಾನ ಮೃತಪಟ್ಟಿದೆ. ಈ ಕಾರಣದಿಂದ ರೈತರು ಪಶು ಆಸ್ಪತ್ರೆಯಲ್ಲಿ ಶ್ವಾನ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದ ರೈತರು ಮನೆಯ ಮಗನಂತೆ ಸಾಕಿದ್ದ ಶ್ವಾನವೂ ವಾಹನದ ಚಕ್ರ ತಾಗಿ ಗಾಯಗೊಂಡಿದೆ. ತಕ್ಷಣ ಕುಂದಗೋಳ ಪಶು ಆಸ್ಪತ್ರೆಗೆ ಬಂದರೂ ಅರ್ಧ ಗಂಟೆ ಕಾಲ ವೈದ್ಯರು ಬರಲೆಂದು ಡಿ ದರ್ಜೆ ಸಿಬ್ಬಂದಿ ಸುಮ್ಮನಿದ್ದಾರೆ. ಹೀಗಾಗಿ ಸಕಾಲಕ್ಕೆ ಚಿಕಿತ್ಸೆ ಸಿಗದೇ ಬಳಿಕ ಶ್ವಾನ ಮೃತಪಟ್ಟಿದೆ.

ಈ ಘಟನೆಯಿಂದ ಕಂಗಾಲಾದ ರೈತರು, ಡಿ ದರ್ಜೆ ಸಿಬ್ಬಂದಿ ಹಾಗೂ ಅಧಿಕಾರಿಗಳ ವರ್ತನೆ ಖಂಡಿಸಿ, ಸಿಬ್ಬಂದಿಯನ್ನು ಅಮಾನತು ಮಾಡುವಂತೆ ಪಟ್ಟು ಹಿಡಿದು ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿ ಪ್ರಾಣ ಬಿಟ್ಟ ನಾಯಿಯನ್ನು ಆಸ್ಪತ್ರೆಯಲ್ಲೇ ಇಟ್ಟು ಕಣ್ಣೀರಿಟ್ಟಿದ್ದಾರೆ.

ಇನ್ನೂ ಚಿಕಿತ್ಸೆ ಸಿಗದೇ ಶ್ವಾನ ಪ್ರಾಣಬಿಟ್ಟ ವಿಚಾರವಾಗಿ ಕಂಗಾಲಾದ ವೈದ್ಯಾಧಿಕಾರಿ ರೈತರನ್ನು ಸಮಾಧಾನ ಮಾಡಲು ಯತ್ನಿಸಿದ್ದಾರೆ. ಆದ್ರೆ ಇತರೆ ಸಿಬ್ಬಂದಿ ಮಾತ್ರ ಘಟನೆ ಬಗ್ಗೆ ಕ್ಯಾರೆ ಎನ್ನದೆ ಮಾರ್ಚ್ ತಿಂಗಳ ಕಡತ ಮಾಡೋದ್ರಲ್ಲೇ ನಿರತರಾಗಿದ್ದರು.

Edited By : Manjunath H D
Kshetra Samachara

Kshetra Samachara

08/03/2022 08:06 pm

Cinque Terre

34.53 K

Cinque Terre

1

ಸಂಬಂಧಿತ ಸುದ್ದಿ