ಕುಂದಗೋಳ : ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಅದೆಷ್ಟೇ ಜಾಗೃತಿ ವಹಿಸಿದರು ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹತೋಟಿ ಸವಾಲಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಹತೋಟಿಗಾಗಿ ಕುಂದಗೋಳ ಪಟ್ಟಣ ಪಂಚಾಯಿತಿ ಹಾಗೂ ಪಟ್ಟಣದ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸೇರಿಕೊಂಡು ಮಾಸ್ಕ್ ಇಲ್ಲದೆ ಸಂಚರಿಸುವ ವಾಹನ ಸವಾರರು ಹಾಗೂ ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರು, ಗ್ರಾಹಕರಿಗೆ ದಂಡದ ಬಿಸಿ ನೀಡುತ್ತಿದ್ದು ಕೇವಲ ಹಗಲು ಹೊತ್ತಿನಲ್ಲಷ್ಟೇ ಅಲ್ಲ ರಾತ್ರಿ ಸಂಚಾರದ ವೇಳೆಯಲ್ಲೂ ಸಹಿತ ಮಾಸ್ಕ್ ಇಲ್ಲದೆ ಓಡಾಡುವವರನ್ನ ಹಿಡಿದು ಸಖತ್ ದಂಡ ವಸೂಲಿ ಮಾಡುತ್ತಿದ್ದಾರೆ.
ಕೇವಲ ದಂಡ ವಸೂಲಿಯಷ್ಟೇ ಅಲ್ಲದೆ ದಯವಿಟ್ಟು ನೀವು ಮಾಸ್ಕ್ ಧರಿಸಿ ಓಡಾಟ ಮಾಡಿ ಇದರಿಂದ ನಿಮ್ಮ ದಂಡದ ಹಣ ಜೊತೆ ನಿಮ್ಮ ಜೀವ ಉಳಿಯುತ್ತೆ ಎಂಬ ಅಂಶ ತಿಳಿಯಿರಿ ಎಂದು ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕಿ ಜಾನಕಿ ಬಳ್ಳಾರಿ ಸಾರ್ವಜನಿಕರಿಗೆ ಸಲಹೆ ನೀಡುತ್ತಿದ್ದಾರೆ.
Kshetra Samachara
30/09/2020 03:46 pm