ಕುಂದಗೋಳ : ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಕೊರೊನಾ ಮೂರನೇ ಅಲೆ ಮುಂಜಾಗ್ರತೆ ಕ್ರಮವಾಗಿ ಬುಧವಾರ ಎಲ್ಲ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣಾ ಅಧಿಕಾರಿಗಳು ಕೋವಿಡ್ ಪರೀಕ್ಷೆಗೆ ಒಳಗಾದ್ದರು.
ಅದರಲ್ಲಿ ಒಬ್ಬ ಪುರುಷ ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬ ಮಹಿಳಾ ಪೊಲೀಸ್ ಸಿಬ್ಬಂದಿಗೆ ಕೊರೊನಾ ವೈರಸ್ ದೃಢಪಟ್ಟಿತ್ತು, ಇದೀಗ ಆ ಸಂಖ್ಯೆ ನಾಲ್ಕಕ್ಕೆ ಏರಿದೆ.
ಹೌದು ! ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮತ್ತೆ ಎರೆಡು ಜನ ಪೊಲೀಸ್ ಪುರುಷ ಸಿಬ್ಬಂದಿಗಳಿಗೆ ಇಂದು ಕೊರೊನಾ ವೈರಸ್ ದೃಢಪಟ್ಟಿದೆ. ಸಧ್ಯ ಕೊರೊನಾ ದೃಢಪಟ್ಟ ಸಿಬ್ಬಂದಿಗಳನ್ನು ಕ್ವಾರಂಟೈನ್'ಗೆ ಒಳಪಡಿಸಲಾಗಿದೆ.
ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ಸ್ಯಾನಿಟೈಜೆಷನ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
Kshetra Samachara
13/01/2022 06:03 pm