ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಂಕ್ರಾಂತಿ ಹಬ್ಬಕ್ಕೆ ಬ್ರೇಕ್ ಹಾಕಿದ ಮಹಾಮಾರಿ: ನೀರಸಾಗರಕ್ಕೆ ನಿರ್ಬಂಧ...!

ಹುಬ್ಬಳ್ಳಿ: ಕಿಲ್ಲರ್ ಕೊರೋನಾ ಹಾವಳಿ ಬಂದಿದ್ದೇ ಬಂದಿದ್ದು, ಎಲ್ಲ ಆಚರಣೆಗೆ ಹಬ್ಬ ಹರಿದಿನಗಳಿಗೆ ಬ್ರೇಕ್ ಹಾಕಿದೆ. ಎರಡನೇ ಅಲೆಯು ಮುಗಿತು ಎಂದು ನಿಟ್ಟುಸಿರು ಬಿಡುವ ಮುನ್ನವೇ ಮೂರನೆಯ ಅಲೆಯು ಆತಂಕ ಸೃಷ್ಟಿಸಿದ್ದು, ಮಕರ ಸಂಕ್ರಾಂತಿ ಹಬ್ಬಕ್ಕೆ ಸಂಕಷ್ಟ ತಂದೊಡ್ಡಿದೆ.

ಹೌದು..ಕೋವಿಡ್ ಹಿನ್ನಲೆಯಲ್ಲಿ ಪ್ರವಾಸಿ ತಾಣಗಳಿಗೆ ಧಾರವಾಡ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು, ಧಾರವಾಡ ಜಿಲ್ಲೆಯ ನೀರಸಾಗರ ಜಲಾಶಯದ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಮಕರ ಸಂಕ್ರಾಂತಿ ಹಬ್ಬದ ದಿನದಂದು ಧಾರವಾಡ ಜಿಲ್ಲೆ ಅಷ್ಟೇ ಅಲ್ಲದೇ ಸುತ್ತಮುತ್ತಲಿನ ಜಿಲ್ಲೆಯಿಂದ ನೀರಸಾಗರ ಜಲಾಶಯಕ್ಕೆ ಆಗಮಿಸಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದರು. ಈ ಬಾರಿಯೂ ಸಾಕಷ್ಟು ಆಸೆಯನ್ನು ಇಟ್ಟುಕೊಂಡಿದ್ದ ಜನರಿಗೆ ನಿರಾಸೆಯಾಗಿದೆ.

ಕೋವಿಡ್ 19 ಮಹಾಮಾರಿ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ನಾಳೆಯಿಂದ, ಒಟ್ಟು ಮೂರು‌ ದಿನಗಳ ವರೆಗೆ ನೀರಸಾಗರ ಜಲಾಶಯಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದೆ. ಮಕರ ಸಂಕ್ರಾತಿ ಹಬ್ಬದ ಪ್ರಯುಕ್ತ ಜಾತ್ರೆ ಹಾಗೂ ಜನಸಂದಣಿ ಸೇರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಂಕ್ರಾಂತಿ ಹಿನ್ನಲೆ ಜಲಾಶಯದಲ್ಲಿ ಸಾವಿರಾರು ಸಂಖ್ಯೆ ಜನರು ಜಮಾವಣೆ ಆಗುತ್ತಿದ್ದರು. ಇದೇ ಕಾರಣಕ್ಕೆ ಜಿಲ್ಲಾಡಳಿತ ಜಲಾಶಯಕ್ಕೆ ಸಾರ್ವಜನಿಕ ನಿಷೇಧ ಹೇರಿದೆ.

ಒಟ್ಟಿನಲ್ಲಿ ಈ ಮಹಾಮಾರಿ ಒಂದಿಲ್ಲೊಂದು ರೀತಿಯಲ್ಲಿ ಸಾರ್ವಜನಿಕ ಸಂಪ್ರದಾಯ ಆಚರಣೆಗೆ ಬ್ರೇಕ್ ಹಾಕುತ್ತಿದೆ. ಅಲ್ಲದೆ ಈ ಮಹಾಮಾರಿ ತೊಲಗುವವರೆಗೂ ಆಚರಣೆಗೆ ಬ್ರೇಕ್ ಬಿಳುವುದಂತೂ ಸಾಮಾನ್ಯ.

Edited By : Manjunath H D
Kshetra Samachara

Kshetra Samachara

13/01/2022 12:17 pm

Cinque Terre

44.61 K

Cinque Terre

3

ಸಂಬಂಧಿತ ಸುದ್ದಿ