ಧಾರವಾಡ: ಈಗಾಗಲೇ ಜಗತ್ತಿನಾದ್ಯಂತ ತನ್ನ ಪಾರುಪತ್ಯ ಮೆರೆಯುತ್ತಿರುವ ಕೊರೊನಾ ತನ್ನ ಎರಡನೇ ಹಂತ ಆರಂಭಿಸಿದೆ. ಲಾಕಡೌನ್ ತೆರವಾದ ನಂತರ ಜನಜೀವನ ಎಂದಿನಂತೆ ನಡೆಯುತ್ತಿದೆ. ಹಬ್ಬ ಹರಿದಿನಗಳು ಕೊಂಚ ಆಚರಣೆಗೆ ಬರುತ್ತಿರುವಾಗಲೇ ಕೊರೊನಾ ತನ್ನ ಎರಡನೇ ಅಲೆ ಸೃಷ್ಟಿ ಮಾಡಿದ್ದು, ಮತ್ತೆ ಹಬ್ಬ ಹರಿದಿನ, ಜಾತ್ರೆ, ಸಮಾರಂಭಗಳಿಗೆ ಕೋಕ್ ನೀಡಲಾಗುತ್ತಿದೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಸುಪ್ರಸಿದ್ಧ ಅಮೃತೇಶ್ವರ ಜಾತ್ರೆ ಇದೇ 29 ರಂದು ನಡೆಯಬೇಕಿತ್ತು. ಆದರೆ, ಕೊರೊನಾ ಎರಡನೇ ಹಂತದ ಹಿನ್ನೆಲೆಯಲ್ಲಿ ಜಾತ್ರೆಯನ್ನು ನಡೆಸದಂತೆ ದೇವಸ್ಥಾನದ ಕಮಿಟಿಗೆ ಜಿಲ್ಲಾಡಳಿತ ಆದೇಶ ನೀಡಿದೆ.
ಪ್ರತಿವರ್ಷ ಸಾವಿರಾರು ಭಕ್ತಾಧಿಗಳು ಸೇರಿ ಈ ಅಮೃತೇಶ್ವರ ಜಾತ್ರೆಯನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದರು. ಆದರೆ, ಇದೀಗ ಈ ಜಾತ್ರೆಗೂ ಕೊರೊನಾ ಎರಡನೇ ಹಂತದ ಕರಿ ನೆರಳು ಆವರಿಸಿದ್ದು, ಭಕ್ತಾಧಿಗಳಲ್ಲಿ ನಿರಾಸೆಯನ್ನುಂಟು ಮಾಡಿದೆ.
ಈಗಾಗಲೇ ದೇವಸ್ಥಾನ ಕಮಿಟಿಯವರು ಜಾತ್ರಾ ಮಹೋತ್ಸವ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ರಂತೆ. ಜಿಲ್ಲಾಡಳಿತ ಇದೀಗ ಜಾತ್ರೆ ನಡೆಸದಂತೆ ಸೂಚನೆ ನೀಡಿದೆ. ವಿಶೇಷ ಪೂಜೆ ಹಾಗೂ ರಥಕ್ಕೆ ಕೇವಲ ಅಲಂಕಾರ ಮಾಡುವಂತೆ ಸೂಚನೆ ನೀಡಿದೆ.
Kshetra Samachara
24/12/2020 10:42 am