ಅಣ್ಣಿಗೇರಿ : ಇತ್ತೀಚಿನ ದಿನಗಳಲ್ಲಿ ಮನುಷ್ಯ ವರ್ಗಕ್ಕೆ ಕೊರೊನಾದಂತಹ ಮಹಾಮಾರಿ ರೋಗ ಆವರಿಸಿಕೊಂಡು ಜನರು ಅನುಭವಿಸುತ್ತಿರುವ ಸಂಕಷ್ಟದಲ್ಲಿಯೇ ಜಾನುವಾರುಗಳಿಗೂ ಕೂಡಾ ಮೊದಲಾದ ರೋಗಗಳು ಅಂಟಿಕೊಳ್ಳುತ್ತಿರುವದರಿಂದ ಜಿಲ್ಲಾಡಾಳಿತ ಜಿಲ್ಲೆಯಾದ್ಯಂತ ಜಾನುವಾರು ಸಂತೆಗಳನ್ನು ನಿಷೇಧ ಮಾಡಿ ಆದೇಶಿಸಿದ್ದರೂ ಕೂಡಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಣ್ಣಿಗೇರಿಯ ಉಪಮಾರುಕಟ್ಟೆ ನವಲಗುಂದ ಮುಂಭಾಗದಲ್ಲಿ ಜಿಲ್ಲಾಡಾಳಿತದ ಯಾವುದೇ ನಿಯಮಗಳನ್ನು ಪಾಲಿಸದೇ ತಮ್ಮದೇ ಆದ ಮಾರುಕಟ್ಟೆಯನ್ನು ನಿರ್ಮಿಸಿಕೊಂಡು ಜಾನುವಾರುಗಳ ವ್ಯವಹಾರ ಮಾಡುತ್ತಿದ್ದರೂ ಕೂಡಾ ಸಂಭಂದಿಸಿದ ಅಧಿಕಾರಿಗಳು ಮೌನವಹಿಸಿರುವದು ಯಾವ ಕಾರಣಕ್ಕಾಗಿ ಅನ್ನುವದು ಗೊತ್ತಾಗುತ್ತಿಲ್ಲ.
ಇನ್ನೂ ಮುಂದಾದರು ಸಂಭಂದಿಸಿದ ಅಧಿಕಾರಿಗಳು ಜಿಲ್ಲಾಡಾಳಿತದ ನಿಯಮಗಳನ್ನು ಪಾಲಿಸಲು ಮುಂದಾಗಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.
Kshetra Samachara
15/10/2020 10:27 pm