ಹುಬ್ಬಳ್ಳಿ: ನಾವು ಕಷ್ಟದಲ್ಲಿದ್ದಾಗ ನಮ್ಮವರೇ ನಮಗೆ ಸಹಾಯ ಮಾಡುವುದು ನಿಜಕ್ಕೂ ತುಂಬಾ ವಿರಳ. ಬದುಕಿನಲ್ಲಿ ಸಾಕಷ್ಟು ಕನಸನ್ನು ಕಟ್ಟಿಕೊಂಡಿದ್ದ ಬಾಲಕನ ಕನಸು ಬಸ್ಸಿನ ಚಕ್ರದಡಿ ಸಿಲುಕಿ ನುಚ್ಚುನೂರಾಗಿತ್ತು.
ಬದುಕನ್ನು ಮುನ್ನಡೆಸಬೇಕಾಗಿದ್ದ ಕಾಲುಗಳೇ ಕಳೆದು ಹೋಗಿದ್ದವು. ಆದರೆ ವಿಧಿ ಕಿತ್ತುಕೊಂಡರೂ ಮತ್ತೊಂದು ರೂಪದಲ್ಲಿ ಆ ದೇವರು ನೆರವಿಗೆ ಬರುತ್ತಾನೆ ಎಂಬುದು ಸುಳ್ಳಲ್ಲ. ದೇವರ ರೂಪದಲ್ಲಿ ಸಾಧಕರೊಬ್ಬರು ಬಂದರೆ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಆತನ ಬದುಕಿನ ಗೋಪುರ ಕಟ್ಟುವ ಕಾರ್ಯದಲ್ಲಿ ಯಶಸ್ವಿಯಾದರು.
ಹಾಗಿದ್ದರೇ ಏನಿದು ಆ ಘಟನೆ ಅಂತೀರಾ? ಪಬ್ಲಿಕ್ ನೆಕ್ಸ್ಟ್ ಪರಿಚಯಿಸುತ್ತಿದೆ ಆ ಹೃದಯವಂತರನ್ನು.
ಹೌದು,,, ಹೀಗೆ ಬೆಡ್ ಮೇಲೆ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡು ಮಲಗಿರುವ ಬಾಲಕ, ಇನ್ನೊಂದಡೆ ತನ್ನ ತಾಯಿ ಬೇರೇಯವರ ಮನೆಗೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆ ದಿನ ನಡೆದ ಅಪಘಾತದಿಂದಾಗಿ ಪಾಲಕರು ಶಾಕ್ ಆಗಿದ್ದರು.
ಅಹ್ಮದ್ ರಜಾ ಇನ್ನೂ ಚಿಕ್ಕ ವಯಸ್ಸು, ದುರ್ಘಟನೆ ನಂತರ ಕುಟುಂಬದ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಮುಂದೇನು ಮಾಡಬೇಕು ಎಂಬುದು ತೋಚದೆ ಎಲ್ಲರೂ ಆಘಾತಕ್ಕೊಳಗಾಗಿದ್ದರು. ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ 14 ವರ್ಷದ ಬಾಲಕ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದ.
ಆ ಸಂದರ್ಭದಲ್ಲಿ ಬಾಲಕ ಅಹ್ಮದ್ ರಜಾಗೆ ದೇವರಾಗಿ ಬಂದರು ಕಿಮ್ಸ್ ವೈದ್ಯರು. ಬಸ್ ಎರಡು ಕಾಲುಗಳ ಮೇಲೆ ಹಾಯ್ದು ಹೋಗಿದ್ದರಿಂದ ಕಾಲುಗಳು ನಿಸ್ತೇಜವಾಗಿದ್ದವು. ಆದರೂ ಇದನ್ನು ಸವಾಲು ಎಂದು ಸ್ವೀಕರಿಸಿದ ಕಿಮ್ಸ್ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಆ ಬಾಲಕನಿಗೆ ಮರು ಜನ್ಮ ನೀಡಿದ್ದಾರೆಂದೇ ಹೇಳಬಹುದು.
ಕಡು ಬಡತನದಲ್ಲಿದ್ದ ಅಹ್ಮದ್ ರಜಾ ಕುಟುಂಬ ಏನು ಮಾಡಬೇಕು ಎಂದು ಚಿಂತಿಸುತ್ತಿರುವಾಗ ನಗರದ ಉದ್ಯಮಿ ಅಶ್ರಫ್ ಅಲಿ, ಬಾಲಕನ ಎಲ್ಲ ವೈದ್ಯಕೀಯ ವೆಚ್ಚ ನಿರ್ವಹಿಸಲು ಮುಂದೆ ಬಂದರು. ಇಷ್ಟೇ ಅಲ್ಲ ಈ ಬಾಲಕನ ಬಡತನ ಪರಿಸ್ಥಿತಿ ಬಗ್ಗೆ ಅಶ್ರಫ್ ಅಲಿ ಅವರು ಹಿಂದಿನ ಜಿಲ್ಲಾಧಿಕಾರಿ ನಿತೀಶ ಪಾಟೀಲ್ ಗಮನಕ್ಕೆ ತಂದರು.
ನಿತೀಶ್ ಪಾಟೀಲ್ ಅವರು ವೈದ್ಯಾಧಿಕಾರಿಗಳಿಗೆ ಹೇಳಿ ಕಿಮ್ಸ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲು ತಿಳಿಸಿದರು. ಕೊರೊನಾ ಕಾರಣ ವೈದ್ಯರು ಮನೆಗೆ ಕರೆದುಕೊಂಡು ಹೋಗಲು ಹೇಳಿದ್ದರು. ಫಿಸಿಯೋ ಥೆರಪಿಗೆಂದು ಮೂರು ದಿನಕ್ಕೊಂದು ಸಾರಿ ಆಸ್ಪತ್ರೆಗೆ ಬರಲು ವೈದ್ಯರು ಹೇಳಿದ್ದರು. ಆಗ ನೆರೆವಿಗೆ ನಿಂತವರು ಉದ್ಯಮಿ ಅಶ್ರಫ್ ಅಲಿ.
ಅಹ್ಮದ್ ರಜಾ ಬಾಲಕನ ಎಲ್ಲ ಜವಾಬ್ದಾರಿಯನ್ನು ಹೊತ್ತ ಅಶ್ರಫ್ ಅಲಿ, ಆತ ಮೊದಲಿನ ರೀತಿಯಲ್ಲಿ ಓಡಾಡುವಂತೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿದ್ದಾಗ ಆತನಿಗೆ ನಿತ್ಯ ಊಟ ಸೇರಿದಂತೆ ಇನ್ನುಳಿದ ಅವಶ್ಯಕ ವಸ್ತುಗಳನ್ನು ತಲುಪಿಸಿ ಮಾನವೀಯತೆ ಮೆರೆದಿದ್ದಾರೆ ಅಶ್ರಫ್ ಅಲಿ.
ಕಡು ಬಡತನದಲ್ಲಿದ್ದ ಅಹ್ಮದ್ ರಜಾ ಕುಟುಂಬ, ವೈದ್ಯರು ಮತ್ತು ಅಶ್ರಫ್ ಅಲಿ ಅವರ ಸಹಾಯವನ್ನು ಕೊಂಡಾಡಿದ್ದಾರೆ. ಸಧ್ಯ ಅಹ್ಮದ್‌ರಜಾ ಮೊದಲಿನಂತೆ ಓಡಾಡುತ್ತಿದ್ದಾನೆ. ಆ ಬಡವನಿಗೆ ಹೊಸ ಬದುಕು ಕಟ್ಟಿಕೊಟ್ಟ ಅಶ್ರಫ್ ಅಲಿ ಹಾಗೂ ತಮ್ಮ ಕಿಮ್ಸ್ ವೈದ್ಯರು ಅಭಿನಂದನಾರ್ಹರಲ್ಲವೆ?
ಅಷ್ಟೇ ಅಲ್ಲದೇ ಅಶ್ರಫ್ ಅಲಿ ಅವರು ಮಹಾಮಾರಿ ಕೊರೊನಾ ವೇಳಯಲ್ಲಿ ಅದೆಷ್ಟೋ ಸಹಾಯ ಮಾಡಿದ್ದಾರೆ. ಸ್ವಂತ ತಮ್ಮ ಹೊಟೇಲ್ ದಲ್ಲಿ ಸೋಂಕಿತರನ್ನು ಇಟ್ಟುಕೊಂಡಿದ್ದರು. ಅವರಿಗೆ ಉಚಿತವಾಗಿ ಊಟ, ಇರಲು ವಸತಿ. ಆಕ್ಸಿಜನ್ ಹೀಗೆ ಹಲವಾರು ರೀತಿಯಲ್ಲಿ ಎಳೆಮರಿ ಕಾಯಿಯಂತೆ ಸಹಾಯ ಮಾಡಿದ್ದಾರೆ. ಇವರ ಸಮಾಜಮುಖಿ ಕಾರ್ಯದಲ್ಲಿ ಅದೆಷ್ಟೋ ಜೀವಗಳು ಉಳಿದಿರುವುದು ಶ್ಲಾಘನೀಯ. ಈ ಮಾನವೀಯತೆಗೆ ಎಲ್ಲರು ಸಂತಸ ವ್ಯಕ್ತಪಡಿಸಿದ್ದಾರೆ....
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/06/2022 08:54 am